ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ – ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ.

ಪರಿಚಯ[ಬದಲಾಯಿಸಿ]

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಹಾಲುಮತ ಕುರುಬ ಮನೆತನದವನಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ . ತಂತ್ರದ ರೂವಾರಿಯಾಗಿದ್ದನು. ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. ಬ್ರಿಟಿಷರು ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು. ಜನವರಿ ೨೬ ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ ಆಗಸ್ಟ್ ೧೫೧೭೯೮ , ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ ಜನವರಿ ೨೬, ಭಾರತವು ಗಣರಾಜ್ಯವೆಂದು ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರೆಸುವದಾಗಿದೆ ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ” ಎಂದು ಹೇಳಿದ್ದಾನೆ’

ಹಿನ್ನೆಲೆ[ಬದಲಾಯಿಸಿ]

  • ರಾಯಣ್ಣನಿಗೆ, ರಾಯ ನಾಯಕ, ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ.

ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಎರಡನೆ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರಾಘಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ಇತ್ತು.

  • ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ. ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಹಿಡಿದು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಆರಸರು ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ. ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌೧೫ನೆಯ ದಿನ ೧೭೯೬, ಆಗಸ್ಟ ಹದಿನೈದು ಭಾರತೀಯರಿಗೆ ರಾಷ್ಟ್ರೀಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ.
  • ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜಾನೇವರಿ ೨೬ನೆಯ ದಿನ ೧೮೩೧; ಜಾನೇವರಿ ಇಪ್ಪತ್ತಾರು ಭಾರತೀಯರಿಗೆ ಸಂಪೂರ್ಣ ಸ್ವಾತಂತ್ಯ್ರದಿನ, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ.
  • ಮೂವತ್ತೈದು ವರುಷ ಜನ್ಮದಾರಭ್ಯದಿಂದ ಸ್ವರ್ಗವಾಸಿಯಾಗುವವರೆಗೆ ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟೀಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ.

ಮರಣ ದಂಡನೆ ಶಿಕ್ಷೆಗೊಳಪಟ್ಟವರು : [ಬದಲಾಯಿಸಿ]

೧. ರಾಯಣ್ಣ ರೋಗಣ್ಣವರ  ೩೫
೨. ಬಾಳಾ ನಾಯಕ  ೫೦
೩. ಬಸಲಿಂಗಪ್ಪ ೩೦
೪. ಕರಬಸಪ್ಪ  ೪೦
೫. ಭೀಮಾ ಜಿಡ್ಡಿಮನಿ  ೪೦
೬. ಕೆಂಚಪ್ಪ  ೩೦
೭. ಅಪೂಜಿ ನಾಯಕ  ೩೦

ಬ್ರಿಟೀಷರು ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ

ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು:[ಬದಲಾಯಿಸಿ]

೧.ರುದ್ರನಾಯಕ  ೫೦
೨. ಎಲ್ಲಾನಾಯಕ  ೪೦
೩. ಅಪ್ಪೂಜಿ  ೪೦
೪. ರಾಣಮೋಜಿಕೊಂಡ  ೩೦
೫. ಕೋನೇರಿ  ೪೦
೬. ನೇಮಣ್ಣ  ೪೦

ಮರಣದ ನಂತರ[ಬದಲಾಯಿಸಿ]

ಕತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಮರವೊಂದನ್ನು ನೆಟ್ಟ. ಅಂದು ನೆಟ್ಟ ಆಲದ ಮರ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ. ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು.

ಚಲನಚಿತ್ರ[ಬದಲಾಯಿಸಿ]

ರಾಯಣ್ಣನ ಬದುಕನ್ನು ಆಧರಿಸಿ ೧೯೬೭ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು. ಮತ್ತೆ ೨೦೧೨ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆಸರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇದನ್ನು ನಿರ್ಮಿಸಿದವರು ಆನಂದ ಅಪ್ಪುಗೋಳಮತ್ತು ಇದನ್ನು ನಿರ್ದೇಶಿಸಿದವರು ನಾಗಣ್ಣ. ಈ ಚಿತ್ರದ ನಾಯಕರಾಗಿ ದರ್ಶನ್ ತೂಗುದೀಪ್ ಅಭಿನಯಿಸಿದ್ದಾರೆ.ತಾಯಿಯ ಪಾತ್ರದಲ್ಲಿ [ಶ್ರೀಮತಿ ಉಮಾಶ್ರೀಯವರು] ಮತ್ತು ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕೂಡಾ ಅಭಿನಯಿಸಿದ್ದಾರೆ.

[೧].

ಸಾಮಾಜಿಕ ಸುಧಾರಣೆಯ ಸಾಹುಕಾರ,ಸಾಮಾನ್ಯರಲ್ಲಿ ಒಬ್ಬ ಅಸಮಾನ್ಯ ಜನಪ್ರತಿನಿಧಿ ನಮ್ಮ ಶ್ರೀ ವಿರೂಪಾಕ್ಷಪ್ಪನವರು ಕುರುಬಾಸ್.ಕೋ.ಇನ್ ವಿಶೇಷ ವರದಿಯಲ್ಲಿ ಓದಿ 

kuruba community leader Virupakshappa

ಪ್ರಾರಂಭಿಕ ಜೀವನ

ಕೆ.ವಿರುಪಾಕ್ಷಪ್ಪನವರು ರಾಯಚೂರು ಜಿಲ್ಲೆ ಸಿಂಧನೂರು ತಾಲುಕಿನ ಕೊಂತನೂರು.

ತಂದೆ; ವೀರಪ್ಪ ಸುಕಾಲಪೇಟೆ ಸಿಂಧನೂರು.

ತಾಯಿ; ಹನುಮಮ್ಮ

ವಿರುಪಾಕ್ಷಪ್ಪನವರ ಮೂಲಸ್ಥಾನ ಬಸವನ ಬಾಗೇವಾಡಿ. ಇವರದು ಪಟೇಲರ ಮನೆತನವಾಗಿತ್ತು.ಅಲ್ಲಿಂದ ಕೊಂತನೂರಿಗೆ ,ನಂತರ ಸಿಂಧನೂರಿನ ಸುಕಾಲಪೇಟೆಯಲ್ಲಿ ವಾಸ.

ವಿರುಪಾಕ್ಷಪ್ಪನವರ ತಾತ ಹನುಮಂತಪ್ಪ .ಅವರಿಗೆ ನಾಲ್ಕು ಜನ ಗಂಡುಮಕ್ಕಳು ,ಐದು ಜನ ಹೆಣ್ಣು ಮಕ್ಕಳು.

1.ನರಸಮ್ಮ

2.ಭೀಮಪ್ಪ

3.ಲಿಂಗಮ್ಮ

4.ನೀಲಮ್ಮ

5.ಸಂಣಪ್ಪ

6.ಗದ್ದೆಮ್ಮ

7.ಅಂಬಮ್ಮ

8.ಅಯ್ಯಪ್ಪ

9.ಈರಪ್ಪ,ಹನುಮಮ್ಮ,

ವಿರುಪಾಕ್ಷಪ್ಪ.

ವಿರುಪಾಕ್ಷಪ್ಪನವರು 1942 ರಂದು ಅವರ ತಾಯಿ ತವರು ಮನೆ ಪನ್ನಾಪೂರ ( ಗಂಗಾವತಿ)

ಗ್ರಾಮದಲ್ಲಿ ಜನನ.

ವಿರುಪಾಕ್ಷಪ್ಪನವರ ಪಾರಂಭ ವಿಧ್ಯಾಭ್ಯಾಸ ಆರಂಭವಾಗಿದ್ದು ಉದು೯ ಭಾಷೆಯ ಮೂಲಕ.

1948 ರಜಾಕಾರರ ಹಾವಳಿಯ ಸಮಯದಲ್ಲಿ ಶಾಲೆಯಲ್ಲಿ ಭಕ್ತ ಸಿರಿಯಾಳನ ನಾಟಕದಲ್ಲಿ ಸಿರಿಯಾಳನ ಮಗನ ಪಾತ್ರ ಮಾಡಿದ್ದರು.

ವಿರುಪಾಕ್ಷಪ್ಪನವರು ಹುಟ್ಟಿದ್ದು 1942 ನೇ ವರ್ಷ. ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚರಿತ್ರೆಯ ವಷ೯ವಾಗಿತ್ತು.

ಮಹಾತ್ಮ ಗಾಂಧಿಜಿ ಅವರು ” ಬ್ರೀಟಿಷರೆ ಭಾರತ ಬಿಟ್ಟು ತೊಲಗಿ ” ಎನ್ನುವ ಹೋರಾಟವನ್ನು ಆರಂಭಿಸಿದರು.

ಇದಕ್ಕೆ ಚರಿತ್ರಾಕಾರರು ಕ್ವಿಟ್ ಇಂಡಿಯ ಮೂಮೆಂಟ್ ಎಂದು ಕರೆದಿದ್ದಾರೆ.

ಇಂತಹ ವಷ೯ದಲ್ಲಿ ಜನಿಸಿದಂತಹ ವಿರುಪಾಕ್ಷಪ್ಪ ನವರು ಸಾಮಾನ್ಯರಲ್ಲಿ ಅಸಾಮಾನ್ಯರು.

ವಿರುಪಾಕ್ಷಪ್ಪನವರಿಗೆ ಬೆನ್ನೆಲುಬು ಹಾಗೂ ಸ್ಪೂರ್ತಿ ಅಂದರೇ ಅವರ ತಾಯಿ;-

ವಿರುಪಾಕ್ಷಪ್ಪನವರಿಗೆ ಹೊಸ ಕನಸುಗಳನ್ನು ತುಂಬಿ ತಪ್ಪು ಮಾಡಿದಾಗ ತಿದ್ದಿ ಹೇಳಿ ದಿನವಿಡೀ ಹೊಲದಲ್ಲಿ ದುಡಿದು ಸ್ವಾಭಿಮಾನದ ಬದುಕನ್ನು ಕಲಿಸಿಕೊಟ್ಟವರು ಅವರ ತಾಯಿ.

ಬಾಲ್ಯದಲ್ಲಿ ಚಂದಮಾಮನನ್ನು ತೋರಿಸಿ ಕಥೆಗಳನ್ನು ” ಜೋಳದನ್ನ ” ತಿನ್ನಿಸುತ್ತಿದ್ದರೂ.

ವಿರುಪಾಕ್ಷಪ್ಪನವರ ವ್ಯಕ್ತಿತ್ವದ ಹಿಂದೆ ಅಪ್ಪನ ಶಾಂತ ಸ್ವಭಾವ. ಹಾಗೂ ತಾಯಿಯು ನಿಡಿದಂತಹ ಬದುಕಿನ ಪಾಠ ಇವತ್ತು ವಿರುಪಾಕ್ಷಪ್ಪ ನವರು ಉನ್ನತವಾದಂತಹ ಸ್ಥಾನದಲ್ಲಿ ಇರಲ್ಲು ಕಾರಣ.

ಆಗಿನ ಕಾಲದ ಊಟ ಮುಖ್ಯವಾಗಿ ” ಜೋಳದ ರೊಟ್ಟಿ, ನವಣೆ ಅನ್ನ, ಬೇಳೆ ಕಾಳು,” ಇದು ಪ್ರತಿನಿತ್ಯದ ಮುಖ್ಯ ಆಹಾರ ಆಗಿತ್ತು.

ಹಾಲು ,ಮೊಸರು ,ತುಪ್ಪ, ಧಾರಾಳವಾಗಿ ಸಿಗುತಿತ್ತು.ಆದರೆ ಅಕ್ಕಿ ಅನ್ನ, ಸಿಹಿ ಊಟ ,ತಿಂಗಳುಗೊಮ್ಮೆ ಮಾತ್ರ.

ವಿರುಪಾಕ್ಷಪ್ಪನವರಿಗೆ ಸ್ವಾಭಿಮಾನ ಬದುಕನ್ನು ಕಲಿಸಿಕೊಟ್ಟ ಅವರ ತಾಯಿ 16-01-2008 ರಂದು ಅಗಲಿದರು .

ಇವತ್ತು ವಿರುಪಾಕ್ಷಪ್ಪ ನವರು ಬಡವರ ಪರ ,ಶೋಷಿತರ ಪರ,ಅನ್ಯಾಯದ ವಿರುದ್ಧ ಇದ್ದಾರೆ ಎಂದರೇ ಅವರ ತಾಯಿ ಹೇಳಿದ ಮಾತುಗಳೇ ಅವರಿಗೆ ಸ್ಪೂರ್ತಿ.

“ನಿನು ಸಮಾಜದ ಮಗ.ಸಾವಿರಾರು ಮಂದಿಗೆ ನಿನ್ನಿಂದ ಸಹಾಯವಾಗಬೇಕು ” ಎಂದು ಹೇಳುತ್ತಿದ್ದರು.

ಆರಂಭ ;-

ಅಂದಿನ ದಿನಮಾನಗಳಲ್ಲಿ ಆಗ ಅಲಲ್ಲಿ ರೇಡಿಯೋಗಳಿರುತ್ತಿದ್ದವು.1970 ರ ಸಾಲು ಭಾರತ ಹಾಗೂ ಪಾಕಿಸ್ತಾನ ಯುದ್ಧ ಆರಂಭವಾಗಿತು.

ಈಗೀನ ಬಾಂಗ್ಲಾದೇಶದಲ್ಲಿ ವಾಸಿಸುವ ಭಾರತೀಯ ಹಿಂದೂಗಳ ಮೇಲ್ಲೆ ಪಾಕಿಸ್ತಾನದ ಸೈನಿಕರ ಬಲಾತ್ಕಾರ ಅತ್ಯಾಚಾರ ಮುಂತಾದವುಗಳನ್ನು ನೆಡೆಸುತ್ತಿದ್ದಾರೆ ಎನ್ನುವ ವರದಿಗಳೂ ಬಿತ್ತರವಾಗುತ್ತಿದ್ದವು.

ಯುವಕರಾಗಿದ ವಿರುಪಾಕ್ಷಪ್ಪ ನವರಿಗೆ ಸಮರೋತ್ಸಾಹ ಉಕ್ಕಿ ಬರುತಿತ್ತು. ಹೇಗಾದರೂ ಮಾಡಿ ಅಲ್ಲಿನ ಭಾರತಿಯರಿಗೆ ನೇರವು ಕೊಡಬೇಕಲ್ಲ ಎಂದು ಯುವ ಮನಸ್ಸು ತುಡಿಯುತಿತ್ತು.

ಅದೇ ಸಮಯಕ್ಕೆ ಎನೋ   ಬಾಂಗ್ಲಾದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಂಗ್ಲಾ ನಿವಾಸಿಗಳಿಗೆ ಅಂದಿನ ಪ್ರಧಾನಿ ” ಶ್ರೀಮತಿ ಇಂದಿರಾ ಗಾಂಧಿ ” ಸಿಂಧನೂರು ತಾಲ್ಲೂಕಿನಲ್ಲಿ 1000 ಹಿಂದೂ ಕುಟುಂಬಗಳಿಗೆ ಆಶ್ರಯ ನಿಡಲ್ಲು ಭೂಮಿಯನ್ನು ಸರಕಾರ ತೆಗೆದುಕೊಳ್ಳುತ್ತಿದೆ ಎನ್ನುವ ಸುದ್ದಿ ವಿರುಪಾಕ್ಷಪ್ಪ ನವರಿಗೆ ತಿಳಿಯಿತು. ಕೆಲವೇ ದಿನಗಳಲ್ಲಿ ತಂಡೋಪತಂಡ ಬಾಂಗ್ಲಾ ನಿವಾಸಿಗಳು ಬರಲಾರಂಭಿಸಿದರೂ.

ವಿರುಪಾಕ್ಷಪ್ಪ ನವರು ಹಾಗೂ ಅವರ ತಂಡ ಈಗಿನ “R.H.CAMP” ಗೇ ಹೋದರು.

ಪಾಕಿಸ್ತಾನಿ ಸೈನಿಕರ ಬೀಭತ್ಸ ಎಷ್ಟಿತ್ತೆಂದರೆ ಸೈನಿಕರ ಬೆಂಗಾವಲಿನಲ್ಲಿ ಬಂದ ನಿವಾಸಿಗಳನ್ನು ಹೊಸಬರು ಮಾತನಾಡಿದರೆ ಕಕ್ಕಾಬಿಕ್ಕಿಯಾಗುತ್ತಿದ್ದರೂ.

ಅವರಿಗೆ ಕನ್ನಡ ಬರುತ್ತಿದ್ದಿಲ್ಲ .ಇವರಿಗೆ ಬಂಗಾಲಿ ಗೊತ್ತಿದ್ದಿಲ್ಲ .ನೊಂದವರನ್ನು ಸಾಂತ್ವವಗೊಳಿಸುವ ಮನಸ್ಸಿಗೆ ಹರಿವ ಕಣ್ಣಿರನ್ನು ಒರೆಸುವ ಕೈಗಳಿಗೆ ಬಾಷೆ ಬೇಕಾಗಿಲ್ಲ ಭಾವನಾತ್ಮಕ ಹೃದಯವಿದ್ದರೆ ಸಾಕು ಎಂದು ಅಂದುಕೊಂಡರು.

ವಿರುಪಾಕ್ಷಪ್ಪ ನವರು ತಮ್ಮ ಸ್ವಂತ ” 9 ಎಕರೆ 20 ಗುಂಟೆ ” ಹೊಲವನ್ನು ನಿರಾಶೀತರಿಗೆ ಕೊಡಲ್ಲು ಮುಂದಾದ ಅಷ್ಟೊತ್ತಿಗಾಗಲೇ ಸರಕಾರವೂ ಕೂಡ ರೈತರ ಮನ ಒಲಿಸಿ ಸ್ವಾಧಿನೆ ಮಾಡಿಕೊಳ್ಳುತ್ತಿತು.

ಸಾವಿರಾರು ಕಿ.ಮೀ.ದೂರದಿಂದ ಬಂದ ನಿರಾಶೀತರಿಗೆ ತಮ್ಮ ಸ್ವಂತ ಹೊಲವನ್ನು ನಿಡಿದ್ದರು. ಅದಕ್ಕೆ ನಾನು ಹೆಳುತ್ತಿರೋದು ವಿರುಪಾಕ್ಷಪ್ಪ ನವರು ಸಾಮಾನ್ಯರಲ್ಲಿ ಅಸಮಾನ್ಯರು.

1964 ರಲ್ಲಿ ಹೊಸದಾಗಿ ಹಿಟ್ಟಿನ ಗಿರಣಿಯನ್ನು ಪ್ರಾರಂಭ ಮಾಡಿದರು. ವಿಧ್ಯುಚ್ಫಕ್ತಿ ಆಗತಾನೆ ಬಂದಿತು.

ಆಗ ಪವರ ಮಂಜೂರಿಯಾಗಬೇಕಾದರೆ ಬೆಂಗಳೂರಿಗೆ ಹೋಗಬೇಕಾಗಿತು.

ವಿರುಪಾಕ್ಷಪ್ಪ ನವರ ಮಾವ  ” ಭಂಗಿ ಭೀಮಣ್ಣ  ಪುರದ ಲಚ್ಚಮಪ್ಪ ಬಾಲಪ್ಪನವರ ” ಹೆಸರಿನಲ್ಲಿ ಮಂಜೂರಿಯಾದ ಪವರನ್ನು ಉಪಯೋಗಿಸಿಕೊಂಡು ಅವರ ಜಾಗದಲ್ಲಿ ” ಕೋಟಿ ಏರಿಯಾ” ಸುಕಾಲಪೇಟೆ ರಸ್ತೆಯಲ್ಲಿ ಗಿರಣಿ ಪ್ರಾರಂಭಿಸಿದರುಯ.

ವಿರುಪಾಕ್ಷಪ್ಪನವರ ಹಿಟ್ಟಿನ ಗಿರಿಣಿಗೆ ” ವಿರುಪಾಕ್ಷಪ್ಪ ನಾಯಕ ಮಂಡಾಳ ಭಟ್ಟಿ ” ಎಂಬುವರು ಭತ್ತ ಬಿಸಲಿಕ್ಕೆ ಬರುತ್ತಿದ್ದರೂ.

ಆಗ ಇವರಿಬ್ಬರೊಡನೆ ಗೆಳೆತನ ಪ್ರಾರಂಭವಾಯಿತು.

ಈ ರೀತಿಯಲ್ಲಿ ವಿರುಪಾಕ್ಷಪ್ಪ ನವರ ಆರಂಭಿಕ ಜೀವನ ಪ್ರಾರಂಭವಾಯಿತ್ತು.

ರಾಜಕೀಯ ಪ್ರವೇಶ;-

ವಿರುಪಾಕ್ಷಪ್ಪ ನವರ ಆರಂಭದ ರಾಜಕೀಯ ಸುಲಭವಾಗಿ ಇರಲಿಲ್ಲ.

ಮೊಟ್ಟ ಮೊದಲ ಬಾರಿಗೆ ವಿರುಪಾಕ್ಷಪ್ಪ ನವರು 1960 ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಪ್ರಥಮವಾಗಿ ಪುರಸಭೆ ಸದಸ್ಯರಾದರು.

ಆಗಿನ ಕಾಲದಲ್ಲಿ “ಬಸವಂತರಾಯ ಪಟೇಲರು” ಹೇಳಿದವರೇ ಸದಸ್ಯರು. ಹೀಗಾಗಿ ವಿರುಪಾಕ್ಷಪ್ಪ ನವರ ಮಾವ “ಭಂಗಿ ಬೀಮಣ್ಣ” ನವರು ವಿರುಪಾಕ್ಷಪ್ಪನವರನ್ನು ಪುರಸಭೆ ಸದಸ್ಯರನ್ನಾಗಿ ಮಾಡಿಸಿದರು.

ಬಸವಂತರಾಯರ ವಿರುದ್ಧ ಯಾರು ಮಾತನಾಡುವಂತಿಲ್ಲ.

ಅವರೇ ಪುರಸಭೆ ಅಧ್ಯಕ್ಷರು ಮತ್ತು ಶಾಸಕರು. ಒಟ್ಟಾರೆಯಾಗಿ ವಿರುಪಾಕ್ಷಪ್ಪ ನವರು 8 ವರ್ಷ ಪುರಸಭೆ ಸದಸ್ಯರಾಗಿ ಕೇಲಸ ಮಾಡಿದರು.

ಸಿಂಧನೂರು ತಾಲುಕಿನ ರಾಜಕೀಯ ಪರಿಚಯ ;-

ಕನಾ೯ಟಕದ ರಾಜ್ಯ ರಾಜಕಾರಣದಲ್ಲಿ ಸಿಂಧನೂರಿನ ರಾಜಕೀಯ ಬಹಳ ವಿಭಿನ್ನ ಆಗಿರುವಂತಹದುಹೈದ್ರಾಬಾದ್ ನವಾಬರ ಆಡಳಿತದಲ್ಲಿ ಪೋಲಿಸಗೌಡರಿಗೆ ಒಂದು ಮಹತ್ವದ ಅಧಿಕಾರ ಪಡೆದಿದ್ದರು.ಹೀಗಾಗಿ ಇಲ್ಲಿ ಪೋಲಿಸಗೌಡರ ಆಳ್ವಿಕೆ ನೆಡೆದು ಬಂದಿರುವಂತಹದ್ದು ಕಂಡುಬರುತ್ತದೆ.ಸಾವ೯ಜನಿಕರ ಮೇಲೆ ಅಪಾರವಾದ ಪ್ರಭಾವ ಪೋಲಿಸಗೌಡರ ಮತ್ತು ಮನೆತನದವರಿದಿತು.ಅವರಲ್ಲಿ ಬಸವಂತರಾಯರು ಪ್ರಮುಖರು.

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ,ನಮ್ಮ ನಿಜಾಮರ ಆಳ್ವಿಕೆ ಪ್ರದೇಶಕ್ಕೆ ಸ್ವಾತಂತ್ರ್ಯ ದೊರೆಯಲಿಲ್ಲ.

ಸಿಂಧನೂರು ತಾಲ್ಲೂಕಿನಲ್ಲಿ ಹೇಳಿಕೊಳ್ಳುವಂತಹ ಹೆಚ್ಚಿನ ಗಲಭೆ ಅನಾಹುತಗಳು ಆಗಲಿಲ್ಲ.ಇದಕ್ಕೆ ಹಿರಿಯರು ಹಾಗೂ ” ಗುರುಸಿಧ್ದಯ್ಯ ಮಠದ ಸ್ವಾಮಿಗಳ ” ದೈಯ೯ ಹಾಗೂ ಮುಂದಾಲೋಚನೆಯೇ ಕಾರಣ.

1948 ರಲ್ಲಿ ಉಕ್ಕಿನ ಮನುಷ್ಯನೆಂದೆ ಹೆಸರಾದ ” ಪ್ರಥಮ ಗೃಹ ಸಚಿವರಾದ ಸಧಾ೯ರ ವಲ್ಲಬಾಯಿ ಪಟೇಲರ ” ಧೈಯ೯ದ ಮುನ್ನಡೆಯಾಗಿ ನಮ್ಮಲ್ಲಿ ರಜಾಕಾರರ ಹಾವಳಿ ಕೊನೆಯಾಗಿ ಈ ಭಾಗಕ್ಕೆ ಸ್ವತಂತ್ರ ಸಿಕ್ಕು ದೇಶದ ಒಕ್ಕೂಟದಲ್ಲಿ ಲೀನವಾಯಿತು.

1952 ರಲ್ಲಿ ಪ್ರಥಮ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತ್ತು.ಸಿಂಧನೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ” ಶ್ರೀ ಜನಾಧ೯ನರಾವ್ ದೇಸಾಯಿಯವರೂ ವಲ್ಕಂದಿನ್ನಿ ದೇಸಾಯಿಯವರ ಮನೆತನದವರು “.

ಹಾಗೂ ನೆಹರೂರವರ ಅತೀ ಸಮೀಪವತಿ೯ಗಳಾಗಿದರು.ಈ ಭಾಗದ ಲಿಂಗಾಯತ ಗೌಡರೆಲ್ಲಾ ಒಂದಾಗಿ

” ಸ್ವತಂತ್ರ ಅಭ್ಯಥಿ೯ಯಾಗಿ ಶ್ರೀ ಶಿವಬಸವನಗೌಡ ಗುಡುದುರು ಇವರನ್ನು ಕಾಂಗ್ರೆಸ್ ಅಭ್ಯಥಿ೯ಯ ವಿರುದ್ಧ ಚುನಾವಣೆಯ ಕಣಕ್ಕಿಳಿಸಿ ,ಸಿಂಧನೂರಿನ ಪ್ರಥಮ ಶಾಸಕನ್ನಾಗಿ ಆಯ್ಕೆ ಮಾಡಲಾಯಿತು “ಈ ಭಾಗದ ಲೋಕಸಭೆ ಕಾಂಗ್ರೇಸ್ ಅಭ್ಯಥಿ೯ಯಾಗಿ ಶ್ರೀ ಮುದ್ವರಾವ ಸ್ಪಧೆ೯, ಸ್ವತಂತ್ರ ಅಭ್ಯಥಿ೯ಯಾಗಿ ಶ್ರೀ ಶಿವಮೂತಿ೯ಸ್ವಾಮಿ ಅಳವಂಡಿ ಇವರು ಆಯ್ಕೆಯಾದರು.

1957 ಬಾಷವಾರು ಪ್ರಾಂತ್ಯ ರಚನೆಯಾಗಿ ಹಳೆ ಹೈದ್ರಾಬಾದ್ ಕನಾ೯ಟಕ ಪ್ರದೇಶದ ರಾಜ್ಯದ ರಾಯಚೂರು, ಗುಲ್ಬರ್ಗಾ, ಬೀದರ , ಜಿಲ್ಲೆಗಳನ್ನು ನೂತನ ಕನ್ನಡ ನಾಡಿನ ಏಕೀಕರಣ ಮೈಸೂರು ರಾಜ್ಯದಲ್ಲಿ ಸೇರಿಸಲಾಯಿತು.

1957 ರಲ್ಲಿ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿರುವ ಪ್ರಬಲ ಲಿಂಗಾಯತ ಜಾತಿಯನ್ನು ಒಪ್ಪಿಕೊಳ್ಳುವ ನೀತಿಯನ್ನು ಅನುಸರಿಸುವ ಮೂಲಕ ಮೈಸೂರು ರಾಜ್ಯದ ಕಾಂಗ್ರೇಸ್ ಮುಖಂಡರು ” ಬಸವಂತರಾಯ ಪಾಟೀಲ” ರನ್ನು ಕಾಂಗ್ರೇಸ್ ಅಭ್ಯಥಿ೯ಯಾಗಿ ಸಿಂಧನೂರು ವಿಧಾನಸಭೆ ಕ್ಷೇತ್ರಕ್ಕೆ ಆಯ್ಕೆ ಮಾಡಿದರು.ಬಸವಂತರಾಯ ಪಾಟೀಲ ವಿರುದ್ಧ “ಅಮರೇಗೌಡ ಗಧ್ದೆಟ್ಗಿ” ಅಭ್ಯಥಿ೯ಯಾದರು.1957 ಚುನಾವಣೆಯಲ್ಲಿ 2500 ಮತಗಳಿಂದ ಸೋಲನ್ನು ಅನುಭವಿಸಿದರು.ಹಾಗೂ 1966 ರಲ್ಲಿಯೂ ಕೂಡ 2000 ಮತಗಳಿಂದ ಪುನಃ ಅಮರೇಗೌಡರು ಸೋತರೂ.
1967 ರ ಚುನಾವಣೆಯಲ್ಲಿ ಸಿಂಧನೂರು ತಾಲ್ಲೂಕಿನ ಜನರು ಬದಲಾವಣೆ ಬಯಸಿದರು. ಅಮರೇಗೌಡರು ಸುಮಾರು 11,000 ಸಾವಿರ ಮತಗಳಿಂದ ಗೆಲುವು ಸಾಧಿಸಿದರು. ನಂತರ ವಿರುಪಾಕ್ಷಪ್ಪ ನವರು 1967 ರಿಂದ ಅಮರೇಗೌಡರ ಹಿಂಬಾಲಕರಾದರೂ.

1967 ರಲ್ಲಿ ಸಿಂಧನೂರ ಪ್ರಾಥಮಿಕ ಭೂ ಅಭಿವೃದ್ಧಿ ಸಹಕಾರಿ ಬ್ಯಾಂಕ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ವಿರುಪಾಕ್ಷಪ್ಪ ನವರು ಸ್ಪಧಿ೯ಸಿ ಗೆಲುವು ಸಾಧಿಸಿದರು.

ವಿಧಾನ ಸದನದಲ್ಲಿ ಕೆ.ವಿರುಪಾಕ್ಷಪ್ಪನವರು ;- 

ವಿರುಪಾಕ್ಷಪ್ಪ ನವರು ಸರಳ ಸಜ್ಜನಿಕೆಯ ರಾಜಕಾರಣಿ , ಇವರು ವಿಧಾನಸಭೆ ಹಾಗೂ ಲೋಕಸಭೆ ಸದಸ್ಯರಾಗಿದ್ದ ಅವಧಿಯಲ್ಲಿ ಅನೇಕ ಜನಪ್ರಿಯ ಕಾಯ೯ಗಳನ್ನು ನಿವ೯ಹಿಸಿದಾರೆ.

ಹಾಗೂ ಹೈದ್ರಾಬಾದ್ ಕನಾ೯ಟಕ ಭಾಗದ ಜಠಿಲ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ವಿಧಾನಸಭೆಯಲ್ಲಿ ದ್ವನಿ ಎತ್ತಿ ಅವುಗಳ ಪರಿಹಾರಕ್ಕಾಗಿ ಶ್ರಮಿಸಿದ್ದಾರೆ.

ವಿಧಾನ ಸಭೆಯಲ್ಲಿ ನೆಡೆದ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಸಚಿವರಿಗೆ ಕೇಳಿದ ಪ್ರಶ್ನೆಗಳು ಈ ಕೆಳಗಿನಂತಿವೆ..

1. ಮುದುಗಲ್ ಪುರಸಭೆ ನಿವೇಶನ ಮಾರಾಟ ;-

486 (927)  ಪೌರಾಡಳಿತ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

( ಅ) ರಾಯಚೂರು ಜಿಲ್ಲೆಯ ಮುದುಗಲ್ ಪುರಸಭೆಯ ಅಗಸ್ಟ್ 1996 ನೇ ತಿಂಗಳಿನ ಸಭೆಯಲ್ಲಿ ಪುರಸಭೆ ಅಧಿನದಲ್ಲಿದ್ದ ನಿವೇಶನಗಳನ್ನು ಅಂತ್ಯತ ಕಡಿಮೆ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡ ನಿಣ೯ಯವನ್ನು ಇಲಾಖಾಧಿಕಾರಿಗಳಿಂದ ತಿರಸ್ಕರಿಸಲಾಗಿದೆಯೆ.

(ಆ) ಹಾಗಿದ್ದಲ್ಲಿ ಜಿಲ್ಲಾದಿಕಾರಿಗಳ ಆದೇಶವನ್ನು ನಿಲ೯ಕ್ಷಿರುವ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರ ಮೇಲೆ ಕಾನೂನು ಕ್ರಮ ಕೈಗೊಳ್ಳದಿರಲ್ಲು ಕಾರಣಗಳೇನು .??

2. ಪುರಸಭೆಗಳಿಗೆ ಅಭಿವೃದ್ಧಿ ಅನುದಾನ ವಿನಿಯೋಗ ;- 

487 ( 928) ಪೌರಾಡಳಿತ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;

(ಅ)  1995-1996 ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯ ನಗರಸಭೆ ಪುರಸಭೆಗಳಿಗೆ ಬಿಡುಗಡೆ ಮಾಡಿರುವ ಅಭಿವೃದ್ಧಿ ಅನುದಾನದ ಮೊತ್ತವೆಷ್ಟು.

(ಆ) ಈ ಹಣವನ್ನು ಯಾವ ಯಾವ ಕಾಯ೯ಗಳಿಗೆ ವಿನಿಯೋಗಿಸಿದೆ.

(ಇ)  ಈ ಹಣ ದುರುಪಯೋಗವಾಗಿರುವ ಬಗ್ಗೆ ತನಿಖೆ ಮಾಡಲಾಗಿದೆಯೆ: ಹಾಗಿದ್ದಲ್ಲಿ ಕೈಗೊಂಡಿರುವ ಕ್ರಮಗಳೇನು ??

3. ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಸಮಗ್ರ ಅಭಿವೃದ್ಧಿ ಯೋಜನೆ;-

(489- 930) ಪೌರಾಡಳಿತ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ರಾಜ್ಯದಲ್ಲಿ ಯಾವ ಯಾವ ನಗರಸಭೆ ಹಾಗೂ ಪುರಸಭೆಗಳಿಗೆ ಕೇಂದ್ರ ಯೋಜನೆಯಾಗಿರುವ ಚಿಕ್ಕ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿಯ ಯೋಜನೆಯ ಅಡಿಯಲ್ಲಿ ಸೇಪ೯ಡೆಯಾಗಿವೆ.

(ಆ) ಈ ಸಮಗ್ರ ಅಭಿವೃದ್ಧಿ ಯೋಜನೆಗೆ ಬಿಡುಗಡೆ ಮಾಡಿರುವ ಹಣವೆಷ್ಟು.

(ಇ) ಯಾವ ಯಾವ ಕೆಲಸಗಳಿಗೆ ಎಷ್ಟು ಎಷ್ಟು ಹಣವನ್ನು ವಿನಿಯೋಗಿಸಲಾಗಿದೆ.

4.ಸಿಂಧನೂರು ನೀರಾವರಿ ವಿಭಾಗದಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ;- 

1269 (1675) ಭಾರಿ ನೀರಾವರಿ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;-

(ಅ) ಸಿಂಧನೂರು ನೀರಾವರಿ ವಿಭಾಗದ ಅಡಿಯಲ್ಲಿ ಬರುವ ಅಚ್ಚಕಟ್ಟು ಪ್ರದೇಶದಲ್ಲಿ ನೀರಾವರಿ ಕಾಯಿದೆಯನ್ವಯ ಯಾವ ಯಾವ ಹುದ್ದೆಗಳಲ್ಲಿ ಎಷ್ಟು ಜನ ಮಂಜೂರಾತಿ ಹುದ್ದೆಯ ಮೇಲೆ ಇದ್ದಾರೆ: ಎಷ್ಟು ಜನ ಹೆಚ್ಚುವರಿ ಹುದ್ದೆಯಲ್ಲಿದ್ದಾರೆ.

(ಆ) ಸಿಂಧನೂರು ನೀರಾವರಿ ವಿಭಾಗದಲ್ಲಿ ಈಗಾಗಲೇ ಕೆಲವೊಬ್ಬ ಹೆಚ್ಚುವರಿ ಸಿಬ್ಬಂಧಿಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ದಿನಗೂಲಿಯ ಮೇಲೆ ಸಿಬ್ಬಂಧಿಗಳನ್ನು ನೇಮಕ ಮಾಡಲಾಗಿದೆಯೆ?

ಮಾಡಿದ್ದರೆ ಇದಕ್ಕೆ ಯಾರು ಅನುಮತಿಯನ್ನು ನೀಡಿದ್ದಾರೆ. ಹುದ್ದೆಗಳು ಖಾಲಿಯಾಗಿರುವುದರಿಂದ ಕೆಲಸಕ್ಕೆ ಆಗುವ ತೊಂದರೆ ನಿವಾರಣೆಗೆ ಸರಕಾರದವರು ಕೈಗೊಳ್ಳುವ ಕ್ರಮಗಳೇನು .?

5. ಹೈದ್ರಾಬಾದ್- ಕನಾ೯ಟಕ ಅಭಿವೃದ್ಧಿ ಯೋಜನೆ ;-

1270( 1772)  ಪ್ರದೇಶಾಭಿವುದ್ದಿ ಮತ್ತು ಕಾಡಾ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;-

(ಅ) ರಾಯಚೂರು ಜಿಲ್ಲೆಯ ಯಲ್ಬುಗಾ೯, ಕೊಪ್ಪಳ, ಕುಷ್ಟಗಿಯಲ್ಲಿ 1993- 1994 ,1994-1995,1995-1996,1996-1997, ಈ ನಾಲ್ಕು ವಷ೯ಗಳಲ್ಲಿ ಹೈದ್ರಾಬಾದ್-ಕನಾ೯ಟಕ ಅಭಿವೃದ್ಧಿ ಯೋಜನೆಯಡಿಯಲ್ಲಿ ಶಾಸಕರೇತರ ಮತ್ತು ಶಾಸಕರ ಅನುಧಾನದಲ್ಲಿ ತೆಗೆದುಕೊಂಡಿರುವ ಕಾಮಗಾರಿಗಳ ವೆಚ್ಚ ಎಷ್ಟು.

(ಆ) ಈ ಕಾಮಗಾರಿಗಳು ಈ ಯಾವ ಹಂತದಲ್ಲಿ ಇದ್ದಾವೆ .

( ಮಾಹಿತಿ ಒದಗಿಸುವುದು).

6. ಉದ್ಯೋಗ ಭರವಸೆ ಯೋಜನೆಯ ಕಾಮಗಾರಿಗಳು;- 

1305 ( 1777) ಗ್ರಾಮೀಣಾಭಿವುದ್ದಿ ಮತ್ತು ಪಂಚಾಯತ್ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;-

(ಅ) ರಾಯಚೂರು ಜಿಲ್ಲೆಯ ಯಲ್ಬುಗಾ೯ ತಾಲ್ಲೂಕು ಮತ್ತು ಕೊಪ್ಪಳ ತಾಲ್ಲೂಕಿನಲ್ಲಿ 1993-1994 , 1994- 1995 , ಉದ್ಯೋಗ ಭರವಸೆ ಯೋಜನೆಯಲ್ಲಿ ತೆಗೆದುಕೊಂಡ ಕಾಮಗಾರಿಗಳು ಯಾವವು?

ಇದಕ್ಕಾಗಿ ಮಾಡಿದ ಖಚು೯ ಹಣವೆಷ್ಟು ?

(ಆ) ಈ ಎರಡು ತಾಲ್ಲೂಕುಗಳಲ್ಲಿ  1993-1994 ,1994-1995  ರಲ್ಲಿ ಉದ್ಯೋಗ ಭರವಸೆ ಯೋಜನೆ ಹಣ ಶೇ 20 ಹಾಗೂ ಜವಹಾರ್ ರೋಜಗಾರ್ ಯೋಜನೆಯ ಶೇ 80 ರಷ್ಟು ಹಣದ ದುರುಪಯೋಗ ಪಡಿಸಿಕೊಳ್ಳಲಾಗಿರುವ ವಿಚಾರ ಸಕಾ೯ರದ ಗಮನಕ್ಕೆ ಬಂದಿದೆಯೇ ?

7. ‘ ಬಿ’ ಫಾಮ೯ಸಿ ಕಾಲೇಜುಗಳು;-

1306 ( 1832) ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;-

( ಅ) ರಾಜ್ಯದಲ್ಲಿ “ಬಿ” ಫಾಮ೯ಸಿ ಕಾಲೇಜುಗಳ ಸಂಖ್ಯೆ ಎಷ್ಟು.

( ವಿವರ ಒದಗಿಸುವುದು)

(ಆ) 1997-1998 ನೇ ವಷ೯ದ ಸೀಟುಗಳ ಹಂಚಿಕೆ ಮಾಡಲಾಗಿದೆಯೇ :

(ಇ)  ಕಾಲೇಜುಗಳ ಆಡಳಿತ ಮಂಡಳಿಯವರು ಸಕಾ೯ರದ ಆದೇಶ ಮೀರಿ ಸೀಟುಗಳನ್ನು ಭತಿ೯ ಮಾಡಿಕೊಂಡಿರುವುದು ಸಕಾ೯ರದ ಗಮನಕ್ಕೆ ಬಂದಿದೆಯೇ: ಬಂದಿದ್ದರೆ ವಿವರ ಒದಗಿಸುವುದು .

(ಈ)  ಈ ಬಗ್ಗೆ ಸಕಾ೯ರವು ಕ್ರಮ ತೆಗೆದುಕೊಳ್ಳುವುದೆ ?

8. ಜವಹರ್ ರೋಜಗಾರ್ ಯೋಜನೆ;- 

1307 ( 1835 ) ಗ್ರಾಮೀಣಾಭಿವುದ್ಧಿ ಮತ್ತು ಪಂಚಾಯತ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;-

(ಅ) ಸಿಂಧನೂರು ತಾಲ್ಲೂಕಿನ 1.ಪಗಡದಿನ್ನಿ

2. ರಾಗಲಪವಿ೯ 3. ಆರ ಎಚ್ ಕ್ಯಾಂಪ್ 4. ರಾಮತ್ನಾಳ 5.ಸಾಲಗುಂದಾ ಇನ್ನಿತರ ಗ್ರಾಮ ಪಂಚಾಯಿತಿಗಳಲ್ಲಿ 1994-1995 ,1995-1996 ನೇ ವರ್ಷದ ಜವಹರ್ ರೋಜಗಾರ್ ಯೋಜನೆಯ ಯಾವ ಕೆಲಸಕ್ಕೆ ಎಷ್ಟೆಷ್ಟು ಹಣ ಪಡೆಯಲಾಗಿದೆ.ಹಣ ಪಡೆದವರಾರು ? ಕಾಮಗಾರಿಗಳು ಪೂತಿ೯ಯಾಗದ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆಯೇ? ಹಾಗಿದ್ದಲ್ಲಿ ಈ ಕುರಿತು ಸಕಾ೯ರದ ಕ್ರಮ ಏನು?

9. ದಕ್ಷಿಣ ಕಲ್ಯಾಣ ಯೋಜನೆ ಅನುಷ್ಟಾನ;-

1477 ( 1833)  ಸಮಾಜ ಕಲ್ಯಾಣ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೇ ;-

(ಅ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ.ಪಿ.ಐ.ಪಾಕ೯ ಮಾಡುವ ಪ್ರಸ್ತಾಪ ಸಕಾ೯ರದವರ ಪರಿಶೀಲನೆಯಲ್ಲಿದೆಯೆ ?

(ಆ) ಹಾಗಿದ್ದಲ್ಲಿ ಕುಳಾಯಿ ಮತ್ತು ತೋಕೂರು ಗ್ರಾಮಗಳಲ್ಲಿ ಎಷ್ಟು ಎಷ್ಟು ಭೂಮಿಯನ್ನು ಸ್ವಾಧೀನ ಪಡಿಸಕೊಳ್ಳಲಾಗಿದೆ.

(ಇ) ಈ ಬಗ್ಗೆ ಕಾಮಗಾರಿ ಪ್ರಾರಂಭಿಸಲಾಗಿದೆಯೆ ? ಹಾಗಿದ್ದಲ್ಲಿ ಈ ಕಾಮಗಾರಿ ಯಾವ ಹಂತದಲ್ಲಿದೆ ? ಇಲ್ಲದಿದ್ದಲ್ಲಿ… ಯಾವಾಗ ಪ್ರಾರಂಭಿಸಲಾಗುವುದು.

10. ಗಂಗಾ ಕಲ್ಯಾಣ ಯೋಜನೆ;- 

1428 (2000) ಸಮಾಜ ಕಲ್ಯಾಣ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;-

(ಅ) ರಾಯಚೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ – ಅಭಿವೃದ್ಧಿ ನಿಗಮದ ಮೂಲಕ ಅನುಷ್ಟಾನಗೊಳಿಸಲಾಗದ ಗಂಗಾ ಕಲ್ಯಾಣ ಯೋಜನೆಯ ಸಂಖ್ಯೆ ಎಷ್ಟು?

( ವಾಷಿ೯ಕವಾರು ಹಾಗೂ ತಾಲ್ಲೂಕುವಾರು ವಿವರಗಳನ್ನು ಒದಗಿಸುವುದು )

(ಆ) ಅನುಷ್ಟಾನಗೊಳಿಸಿದ ಏಜೆನ್ಸಿ ಯವುದು ? ಪೂತಿ೯ಗೊಳಿಸಲಾಗದ ಹಾಗೂ ಪ್ರಗತಿಯಲ್ಲಿರುವ ಸಂಖ್ಯೆ ಎಷ್ಟು?

11. ಹೈದ್ರಾಬಾದ್ -ಕನಾ೯ಟಕ ಯೋಜನೆ ಕುರಿತು;- 

1505 (2047) ಪ್ರದೇಶಾಭಿವುದ್ಧಿ ಮತ್ತು ಕಾಡಾ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ ;-

(ಅ) ರಾಯಚೂರು ಜಿಲ್ಲೆಯ ಯಲ್ಬುಗಾ೯, ಕೊಪ್ಪಳ, ಕುಷ್ಟಗಿಯಲ್ಲಿ 1993-1994, 1994-1995, 1995-1996, 1996-1997 ನೇ ಮಾಚ೯ 21 ನೇವರೆಗೆ ಈ ನಾಲ್ಕು ವರ್ಷಗಳಲ್ಲಿ ಹೈದ್ರಾಬಾದ್ – ಕನಾ೯ಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶಾಸಕರೇತರ ಮತ್ತು ಶಾಸಕರ ಅನುದಾನದಲ್ಲಿ ತೆಗೆದುಕೊಂಡಿರುವ ಕಾಮಗಾರಿಗಳೇಷ್ಟು .

( ಖಚು೯ ಮಾಡಿರುವ ಹಣದ ವಿವರ ಒದಗಿಸುವುದು?

(ಆ) ಕಾಮಗಾರಿ ಈಗ ಯಾವ ಹಂತದಲ್ಲಿದೆ

12. ಕೇಂದ್ರ ಸರ್ಕಾರದ ರಾಜೀವ ಟೆಕ್ನಾಲಜಿ ಉಪಯೋಗ;-

1538 (2129)  ಗ್ರಾಮೀಣಾಭಿವುದ್ಧಿ ಮತ್ತು ಪಂಚಾಯತ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ರಾಜ್ಯದಲ್ಲಿ ಕೇಂದ್ರ ಸರ್ಕಾರದ ರಾಜೀವ್ ಟೆಕ್ನಾಲಜಿ ಉಪಯೋಗ ಪಡೆಯಲಾದ ಜಿಲ್ಲೆ ,ತಾಲ್ಲೂಕುಗಳ ವಿವರ ನೀಡುವುದು.

(ಆ) ರಾಯಚೂರು ಜಿಲ್ಲೆಯಲ್ಲಿ ಈ ಯೋಜನೆಯು ಯಾವ ಯಾವ ಗ್ರಾಮಗಳಿಗೆ ಮಂಜೂರಾಗಿದೆ.ಮತ್ತು ಮಂಜೂರು ದೊರೆಯಬೇಕಾದ ಗ್ರಾಮಗಳ ವಿವರ ನೀಡುವುದು.

(ಇ) ರಾಯಚೂರು ಜಿಲ್ಲೆಯಲ್ಲಿ ಅನೇಕ ಗ್ರಾಮಗಳಿಗೆ ಈ ಯೋಜನೆಯನ್ನು ಅಳವಡಿಸಲಾಗದ ವಿಷಯ ಸಕಾ೯ರದ ಗಮನಕ್ಕೆ ಬಂದಿದೆಯೇ;

(ಈ) ಬಂದಿದ್ದರೆ ಇದರ ಲಾಭ ಪಡೆಯಲು ಸಕಾ೯ರದವರ ಕ್ರಮ ಏನು?

13.ಜವಹಾರ್ ರೋಜಗಾರ್ ಯೋಜನೆಯಲ್ಲಿ ಹಣ ದುರುಪಯೋಗ ;-

260( 2117) ಗ್ರಾಮೀಣಾಭಿವುದ್ಧಿ ಹಾಗೂ ಪಂಚಾಯತ ರಾಜ್ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ರಾಯಚೂರು ಜಿಲ್ಲೆಯ ಯಲಬುರ್ಗಾ ತಾಲ್ಲೂಕು ಮತ್ತು ಕೊಪ್ಪಳ ತಾಲ್ಲೂಕಿನ 1993 – 1994 , 1994-1995 , ಉದ್ಯೋಗ ಭರವಸೆ ಯೋಜನೆಯಲ್ಲಿ ತೆಗೆದುಕೊಂಡ ಕಾಮಗಾರಿಗಳ ವಿವರ, ಖಚು೯ ಮಾಡಿದ ಹಣದ ವಿವರ ಒದಗಿಸುವುದು.

(ಆ) ಈ ಎರಡು ತಾಲ್ಲೂಕುಗಳಲ್ಲಿ 1993-1994 ,1994-1995 ರಲ್ಲಿ ಜವಹಾರ್ ರೋಜಗಾರ್ ಯೋಜನೆಯ ಹಣದ ದುರುಪಯೋಗ ಪಡಿಸಿಕೊಳ್ಳಲಾಗಿರುವ ವಿಚಾರವೂ ಸಕಾ೯ರದ ಗಮನಕ್ಕೆ ಬಂದಿದೆಯೇ?

(ಇ) ಬಂದಿದ್ದಲ್ಲಿ ತೆಗೆದುಕೊಂಡ ಕ್ರಮಗಳೇನು

14. ಮೂಲೆ ಪ್ಲಾಟುಗಳ ವಿಲೇವಾರಿ;- 

295 (2163) ಕ್ರಷಿ ಮಾರುಕಟ್ಟೆ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ಸಿಂಧನೂರು ಕ್ರಷಿ ಮಾರುಕಟ್ಟೆ ಸಮಿತಿಯ ಯಾಡ೯ನಲ್ಲಿರುವ ಮೂಲೆಗಳ ಫ್ಲಾಟುಗಳ ಸಂಖ್ಯೆ ಎಷ್ಟು? ಹಳೆ ಯಾಡ೯ ಮತ್ತು ವಿಸ್ತೃತ ಯಾಡ೯ನ ವಿವರ ನೀಡುವುದು.

(ಆ) ಮೂಲೆ ಪ್ಲಾಟುಗಳ  ವಿಲೇವಾರು ಮಾಡುವಲ್ಲಿ ಇಲಾಖೆಯ ನೀತಿ ನಿಯಮಗಳೇನು :

(ಇ) ಸಿಂಧನೂರು ಮಾರುಕಟ್ಟೆ ಯಾಡ೯ನಲ್ಲಿರುವ ಈ ವಷ೯ದಲ್ಲಿ ಮೂಲೆ ಪ್ಲಾಟುಗಳನ್ನು ವ್ಯಾಪರಿಗಳಿಗೆ ವಿಲೇವಾರಿ ಮಾಡಲಾಗಿರುವ ವಿಚಾರವೂ ಸಕಾ೯ರದ ಗಮನಕ್ಕೆ ಬಂದಿದೆಯೇ .ಹಾಗಿದ್ದಲ್ಲಿ ಎಷ್ಟು ಮೂಲೆ ಪ್ಲಾಟುಗಳನ್ನು ಯಾರಾರಿಗೆ ಹಂಚಲಾಗಿದೆ ವಿವರಿಸುವುದು.

15. ಸಿಂಧನೂರು ತಾಲ್ಲೂಕು ಪಂಚಾಯತ ನಿಮಿ೯ಸಿದ ಮಳಿಗೆಗಳು;-

2786 ( 4032 ) ಗ್ರಾಮೀಣಾಭಿವುದ್ಧಿ ಪಂಚಾಯತ್ ರಾಜ್ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ಸಿಂಧನೂರು ತಾಲ್ಲೂಕು ಪಂಚಾಯತ ಆವರಣದಲ್ಲಿ ನಿಮಿ೯ಸಲಾದ ಮಳಿಗೆಗಳು ಎಷ್ಟು. ಜಿಲ್ಲಾ ಪಂಚಾಯ್ತಿ ಒಪ್ಪಿಗೆ ಪಡೆಯಲಾಗಿದೆಯೇ ,ಹಾಗಿದ್ದಲ್ಲಿ ಎಷ್ಟು ಮಳಿಗೆಗಳಿಗೆ ಜಿಲ್ಲಾ ಪಂಚಾಯ್ತಿ ಒಪ್ಪಿಗೆ ಪಡೆಯಲಾಗಿದೆ.

(ಆ) ಮಳಿಗೆಗಳನ್ನು ಯಾವ ಆಧಾರದ ಮೇಲೆ ಮತ್ತು ಯಾವ ಷರತ್ತುಗಳಿಗೊಳಪಟ್ಟು ಕೊಡಲಾಗಿದೆ. ಯಾವ ಮಳಿಗೆ ಯಾರಿಗೆ ಎಷ್ಟು ಬಾಡಿಗೆಯ ಮೇಲೆ ಕೊಡಲಾಗಿದೆ.

(ವಿವರ ಒದಗಿಸುವುದು)

(ಇ) ಇನ್ನೂ ಮುಂದೆ ನಿಮಿ೯ಸಲು ಉದ್ದೇಶಿಸಿರುವ ಮಳಿಗೆಗಳ ಸಂಖ್ಯೆ ಯಾವ ಷರತ್ತಿನ ಆಧಾರದ ಮೇಲೆ ಕೊಡಲು ತಿಮಾ೯ನಿಸಲಾಗಿದೆ .ಜಿಲ್ಲಾ ಪಂಚಾಯ್ತಿ ಅನುಮತಿ ಪಡೆಯಲಾಗಿದೆಯೇ?

16.ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕ ದಂಪತಿಗಳ ವಗಾ೯ವಣೆ ;-

2926 ( 4118) ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

( ಅ) ಪತಿಯು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಅಥವಾ ಅದರ ಹತ್ತಿರದ ಸ್ಥಳಕ್ಕೆಯಾಗಲೀ ವಗಾ೯ವಣೆಯನ್ನು ಕೋರಿರುವ ಹಾಗೂ ಪತ್ನಿಯು ಕೇಲಸ ಮಾಡುತ್ತಿರುವ ಸ್ಥಳಕ್ಕೆ ಅಥವಾ ಅದರ ಹತ್ತಿರದ ಸ್ಥಳಕ್ಕೆ ವಗಾ೯ವಣೆಯನ್ನು ಪತಿಯೂ ಕೋರಿ ಸಲ್ಲಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾರು .

( ಜಿಲ್ಲಾವಾರು ಮಾಹಿತಿ ನೀಡುವುದು)

(ಆ) ಈ ರೀತಿಯ ಅಜಿ೯ ಸಲ್ಲಿಸಿರುವ ಶಿಕ್ಷಕ ದಂಪತಿಗಳಲ್ಲಿ  ಪ್ರಾಥಮಿಕ ಮತ್ತು ಪ್ರೌಢಶಾಲಾ ಯಾವ ಯಾವ ಶಿಕ್ಷಕರ ವಗಾ೯ವಣೆ ಕೋರಿಕೆಗೆ ಕೈಗೊಳ್ಳಲಾಗಿದಿದ್ದಕ್ಕೆ ಕಾರಣಗಳೇನು .

( ಜಿಲ್ಲಾವಾರು ಮಾಹಿತಿ ನೀಡುವುದು).

17.ಸಿಂಧನೂರು ಪುರಸಭೆಗೆ ಸೇರಿದ ಜಮೀನು ;- 

569 ( 3803) ಪೌರಾಡಳಿತ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

( ಸಿಂಧನೂರು ಪುರಸಭೆ ವ್ಯಾಪ್ತಿಯಲ್ಲಿರುವ ಪುರಸಭೆಯ ಒಟ್ಟು ಜಾಗದ ವ್ಯಾಪ್ತಿ ಎಷ್ಟು.

ಸವೆ೯ ನಂ ಮತ್ತು ಎಕರೆ ವಿವರ ಒದಗಿಸುವುದು.

(ಆ) ಪುರಸಭೆ ಜಾಗವನ್ನು ಅತಿಕ್ರಮಣ ಮಾಡಿರುವ ವಿಚಾರ ಸಕಾ೯ರದವರ ಗಮನಕ್ಕೆ ಬಂದಿದ್ದೆಯೇ ;

( ವಿವರ ಒದಗಿಸುವುದು)

(ಇ) ಅತಿಕ್ರಮಣ ಆಗಿದ್ದಲ್ಲಿ ತೆರವುಗೊಳಿಸಲು ಸಕಾ೯ರದವರು ಕೈಗೊಳ್ಳಲಿರುವ ಕ್ರಮವೇನು ?

18. ಟೆಂಡರ್ ಮೂಲಕ ಪ್ರಾರಂಭಿಸಲಾದ ರಸ್ತೆ ಕಾಮಗಾರಿ;-

1123 (1164) ಲೋಕೋಪಯೋಗಿ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಒಟ್ಟು ರಸ್ತೆ ಉದ್ದ ಎಷ್ಟು ;

(ಆ) 1995-1996 ಮತ್ತು1996-1997 ನೇ ವಷ೯ದಲ್ಲಿ ಟೆಂಡರ್ ಮೂಲಕ ಪ್ರಾರಂಭಿಸಲಾದ ರಸ್ತೆ ಕಾಮಗಾರಿ ಉದ್ದ ಎಷ್ಟು. ಹಾಗೂ ವೆಚ್ಚ ಮಾಡಿದ ಹಣವೆಷ್ಟು.

(ಇ) ಟೆಂಡರ್ ಮೂಲಕ ಪಡೆಯಲಾದ ಗುತ್ತೇದಾರರು ಸರಕಾರದಿಂದ ಟೆಂಡರ್ ಹಣಕ್ಕಿಂತ ಹೆಚ್ಚುವರಿ ಎಷ್ಟು ಹಣ ಪಡೆಯಲಾಗಿದೆ .( ಯಾವ ಯಾವ ರಸ್ತೆಯ ಮೇಲ್ಲೆ ವಿವರ ಒದಗಿಸುವುದು).

19.ಏತ ನೀರಾವರಿ ಕೆಲಸದ ಬಗ್ಗೆ;- 

1688 ( 2419) ನೀರಾವರಿ ಮತ್ತು ಅಂತಜ೯ಲ ಅಭಿವೃದ್ಧಿ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) 1994 -1995 ನೇ ಸಾಲಿನಲ್ಲಿ ಮಂಜೂರಾಗಿರುವ ಹುಡಾ ಏತಾ ನೀರಾವರಿ ಕೇಲಸವೂ ಯಾವ ಹಂತದಲ್ಲಿದೆ. ಮತ್ತು ಇದುವರೆಗೂ ಒದಗಿಸಲಾದ ಹಣ ಎಷ್ಟು.

( ವಿವರ ನೀಡುವುದು)

(ಆ) ಈ ಕೆಲಸಕ್ಕೆ 1996-1997 ನೇ ಸಾಲಿನಲ್ಲಿ ಹಣವನ್ನು ಒದಗಿಸಲಾಗಿದೆಯೇ?

20. ರಸ್ತೆಗಳನ್ನು ಕುರಿತು;-

1690 ( 2495) ಭಾರಿ ನೀರಾವರಿ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ಸಿಂಧನೂರು ತಾಲ್ಲೂಕಿನಲ್ಲಿ ಬರುವ ನೀರಾವರಿ ಇಲಾಖೆಗೆ ಒಳಪಟ್ಟಿರುವ ರಸ್ತೆಯ ಒಟ್ಟು ಉದ್ದ .

(ಆ) ಅದರಲ್ಲಿ ಮುಖ್ಯ ರಸ್ತೆಗಳು ಯವವು.

(ಇ) ಈಗಾಗಲೇ ಎರಡು ವಷ೯ಗಳಿಂದ ದುರಸ್ಥಿ ಮಾಡದೆ ರಸ್ತೆಗಳು ಪೂತಿ೯ ಹಾಳಾಗಿರುವ ವಿಚಾರ ಸಕಾ೯ರದ ಗಮನಕ್ಕೆ ಬಂದಿದೆಯೇ .

(ಈ) ಹಾಗಿದ್ದಲ್ಲಿ ಈ ರಸ್ತೆಗಳ ದುರಸ್ತಿಗೆ ಸಕಾ೯ರದವರು ಕೈಗೊಳ್ಳುವ ಕ್ರಮಗಳೇನು?

21. ಪ್ರೌಢ ಶಾಲೆಗಳಲ್ಲಿ ಮತ್ತು ಕಿರಿಯ ಮಹಾವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳು;-

171( 2657) ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ರಾಜ್ಯದಲ್ಲಿರುವ ಸಕಾ೯ರಿ ಪ್ರೌಢಶಾಲೆಗಳು ಮತ್ತು ಕಿರಿಯ ಮಹಾವಿದ್ಯಾಲಯಗಳ ಸಂಖ್ಯೆ ಎಷ್ಟು .ಇವುಗಳಲ್ಲಿ ಇಂದಿಗೂ ಖಾಲಿಯಾಗಿರುವ ಬೋಧಕ ,ಬೋಧಕೇತರ ಹುದ್ದೆಗಳ ಸಂಖ್ಯೆ ಎಷ್ಟು.

(ಜಿಲ್ಲಾವಾರು ಮಾಹಿತಿ ನೀಡುವುದು)

(ಆ) ರಾಯಚೂರು ಜಿಲ್ಲೆಯಲ್ಲಿರುವ ಸಕಾ೯ರಿ ಪ್ರೌಢಶಾಲೆಗಳಲ್ಲಿ ಮತ್ತು ಕಿರಿಯ ಮಹಾವಿದ್ಯಾಲಯಗಳಲ್ಲಿ ಯಾವ ಯಾವ ವಷ೯ಗಳಿಂದ ಶಿಕ್ಷಕರ ಮತ್ತು ಉಪನ್ಯಾಸಕರ (ವಿಷಯವಾರು )ಕೊರತೆ ಇದೆ.

22. ಶಿಕ್ಷಕರ ತರಬೇತಿ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ;-

1762 ( 2525) ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ಸಿಂಧನೂರಿನಲ್ಲಿರುವ ಶಿಕ್ಷಕರ ತರಬೇತಿ ಕಟ್ಟಡ ಶಿಥಿಲಗೊಂಡಿರುವ ವಿಷಯ ಸಕಾ೯ರದವರ ಗಮನಕ್ಕೆ ಬಂದಿದ್ದೆಯೇ?

(ಆ) ಈ ಕಟ್ಟಡಗಳ ದುರಸ್ತಿ ಮಾಡಲು ಸಕಾ೯ರದವರು ಕೈಗೊಂಡ ಕ್ರಮಗಳೇನು.?

23. ತುಂಗಭದ್ರ ಆಣೆಕಟ್ಟು ಮತ್ತು ಮುಖ್ಯ ಕಾಲುವೆಗಳ ನಿಮಾ೯ಣ;-

937 ( 1240) ಭಾರಿ ನೀರಾವರಿ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ತುಂಗಭದ್ರ ಆಣೆಕಟ್ಟು ಮತ್ತು ಮುಖ್ಯ ಕಾಲುವೆಗಳ ನಿರ್ಮಾಣ ಕಾರ್ಯ ಯಾವ ವಷ೯ದಿಂದ ಪ್ರಾರಂಭಿಸಿ ಪರಿಪೂರ್ಣ ಮಾಡಲಾಗಿದೆ. ಅದಕ್ಕಾಗಿ ಖಚಾ೯ಗಿರುವ ಮೊತ್ತವೆಷ್ಟು ? ಈ ಕಾಲುವೆಗಳ ಉದ್ದವೇಷ್ಟು ? ಪ್ರತಿಯೊಂದು ಮುಖ್ಯ ಕಾಲುವೆಗಳು ಯಾವ ಯಾವ ಜಿಲ್ಲೆಗಳಲ್ಲಿ ಯಾವ ಯಾವ ತಾಲ್ಲೂಕುಗಳಲ್ಲಿ ಎಷ್ಟೆಷ್ಟು ? ಜಮೀನುಗಳಿಗೆ ಯಾವ ಯಾವ ರೀತಿಯ ಬೆಳೆಗಳಿಗೆ ನೀರನ್ನು ಒದಗಿಸಲಾಗುತ್ತಿದೆ.

( ವಿವರ ನೀಡುವುದು)

(ಆ) ಮುಖ್ಯ ಕಾಲುವೆಗಳ ನಿಮಾ೯ಣ ಕಾಯ೯ಮುಗಿದ ಮರು ವಷ೯ದಿಂದ ಇಂದಿನವರೆಗೂ ವಾಷಿ೯ಕ ದುರಸ್ತಿಗಾಗಿ ,ವಿಶೇಷ ದುರಸ್ತಿಗಾಗಿ ಅಕಸ್ಮಾತ್ತಾಗಿ ಬಿರುಕು ಬಿಟ್ಟಿದರೆ ಖಚು೯ ಮಾಡಿರುವ ಹಣದ ಮೊತವೆಷ್ಟು.?

24. ಅಂಬೇಡ್ಕರ್ ಯೋಜನೆಯ ಮನೆಗಳು;-

1728 ( 2294) ವಸತಿ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ಸಿಂಧನೂರು ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯತಿ ವತಿಯಿಂದ 1992.1994,1995, ರಲ್ಲಿ ಅಂಬೇಡ್ಕರ್ ಯೋಜನೆಯಲ್ಲಿ ಮಂಜೂರಿಯಾದ ಮನೆಗಳೆಷ್ಟು ? ಅದರಲ್ಲಿ ಎಷ್ಟು ಪೂತಿ೯ಯಾಗಿವೆ. ಪೂತಿ೯ಯಾಗದೆ ಇರುವ ಮನೆಗಳೇಷ್ಟು .ಪೂತಿ೯ಯಾಗದೇ ಇರಲ್ಲು ಕಾರಣಗಳೇನು ?

(ಆ) ಪೂತಿ೯ಯಾಗದೆ ಇರುವ ಮನೆಗಳ ಸಂಬಧ ಸಂಪೂರ್ಣ ಹಣ ಪಡೆದಿರುವ ವಿಚಾರ ಸಕಾ೯ರದ ಗಮನಕ್ಕೆ ಬಂದಿದೆಯೇ? ಆ ಹಣ ಯಾರು ಪಡೆದಿದ್ದಾರೆ; ಅವರ ಮೇಲೆ ಸಕಾ೯ರ ಯಾವ ಕ್ರಮ ಕೈಗೊಂಡಿದೆ.

(ಇ) ಪೂತಿ೯ಯಾಗಲಾರದ ಮನೆಗಳನ್ನು ಎಷ್ಟು ದಿವಸಗಳಲ್ಲಿ ಪೂತಿ೯ ಮಾಡಲಾಗುವುದು?

25.ಜಾನುವಾರು ಜನಗಣತಿ ಮತ್ತು ಆಸ್ಪತ್ರೆಗಳು;-

2336( 3213)  ಪಶುಸಂಗೋಪನಾ ರಾಜ್ಯ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ಜಾನುವಾರು ಜನಗಣತಿಯನ್ನು ಎಷ್ಟು ವಷ೯ಕ್ಕೊಮ್ಮೆ ಕೈಗೆತ್ತಿಕೊಳ್ಳಲಾಗುವುದು.ಕಳೆದ ಜನಗಣತಿಯನ್ನು ಯಾವ ವಷ೯ದಲ್ಲಿ ಮುಗಿಸಲಾಗಿದೆ.ಅದರನ್ವಯ ಪ್ರತಿ ಪ್ರಾಣಿ ವಗ೯ಗಳ ಸಂಖ್ಯೆ ಎಷ್ಟಿದೆ?

(ಜಿಲ್ಲಾವಾರು ಮಾಹಿತಿ ನೀಡುವುದು)

(ಆ) ಎಷ್ಟು ಜಾನುವಾರುಗಳಿಗೆ ಒಂದು ಆಸ್ಪತ್ರೆ ಇರಬೇಕೆಂದು ಸಕಾ೯ರ ನಿಗದಿಪಡಿಸಿದೆ.ಅದರಂತೆಯೇ ಆಸ್ಪತ್ರೆ್ಗಳನ್ನು ಪ್ರಾರಂಭಿಸಲ್ಲಾಗಿದೆಯೇ ? ಹಾಗಿಲ್ಲದಿದ್ದಲ್ಲಿ ಕಾರಣಗಳೇನು?.

(ಇ) ರಾಜ್ಯದಲ್ಲಿ ಯಾವ ಯಾವ ಪ್ರಾಣಿಯ ಜಾನುವಾರು (ಪಶು) ಆಸ್ಪತ್ರೆಗಳಿಗೆ ಅವು ಎಲ್ಲೆಲ್ಲಿ ಇವೆ.ಪ್ರತಿಯೊಂದು ಆಸ್ಪತ್ರೆಗೆ ಉಚಿತವಾಗಿ ಔಷದಕ್ಕಾಗಿ ಹಣವನ್ನು ಸಕಾ೯ರ ಬಿಡುಗಡೆ ಮಾಡುತ್ತಲಿದೆ . ಈ ರೀತಿ ಬಿಡುಗಡೆ ಮಾಡುತ್ತಿರುವ ಹಣದ ಮೊತ್ತವನ್ನು ಹೆಚ್ಚಿಸಲು ಸಕಾ೯ರ ಯೋಚಿಸಿದೆಯೇ ??

26.ಕುಡಿಯುವ ನೀರಿನ ಸೌಕಾಯ೯ ;- 

1031 (1406) ಗ್ರಾಮೀಣಾಭಿವುದ್ಧಿ ಮತ್ತು ಪಂಚಾಯತ್ ರಾಜ್ ,ವಾತಾ೯ ಮತ್ತು ಪ್ರಚಾರ ಸಚಿವರು ಈ ವಿಷಯಗಳ‌ನ್ನು ದಯವಿಟ್ಟು ತಿಳಿಸುವರೆ;-

(ಅ) ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಯಾವ ಯಾವ ಹಳ್ಳಿಗಳು ಸಂರಕ್ಷಿತ ಕುಡಿಯುವ ನೀರಿನ ಸೌಕಾಯ೯ಗಳನ್ನು ಪಡೆದಿವೆ.

(ತಾಲ್ಲೂಕುವಾರು ವಿವರ ಒದಗಿಸುವುದು)

(ಆ) 1996 -1997 ನೇ ಸಾಲಿನಿಂದ ಇಂದಿನವರೆಗೂ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಯಾವ ಯಾವ ಹಳ್ಳಿಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಧಾನದ ಅಡಿಯಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ನಳಗಳ ಮೂಲಕ ಪಡೆದುಕೊಂಡಿವೆ.ಇವುಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿರುವ ಗ್ರಾಮಗಳಾವವು ಇದಕ್ಕೆ ಕಾರಣಗಳೇನು ?

27. ವೃತ್ತಿಪರ ವ್ಯಾಸಂಗಕ್ಕೆ ಸೌಲಭ್ಯ;- 

1037 ( 1407) ಉನ್ನತ ಶಿಕ್ಷಣ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ರಾಯಚೂರು ಜಿಲ್ಲೆಯಲ್ಲಿರುವ ಸಕಾ೯ರಿ ಮತ್ತು ಖಾಸಗಿ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಯಾವ ಯಾವ ವಿಷಯಗಳ ವೃತ್ತಿಪರ ವ್ಯಾಸಂಗದ ಸೌಲಭ್ಯವನ್ನು ಸಕಾ೯ರ ಕಲ್ಪಿಸಿದೆ.

(ಆ) ಕಳೆದ ವರ್ಷ ಮತ್ತು ಈ ವರ್ಷ ಸಕಾ೯ರಿ ಪದವಿ ಪೂರ್ವ ಮಹಾವಿಧ್ಯಾಲಯ ಮುದುಗಲ್ ( ರಾಯಚೂರು ಜಿಲ್ಲೆ) ಪೂರ್ವ ಪ್ರಾಥಮಿಕ ವ್ಯಾಸಂಗಕ್ಕೆ (ಎನ್, ಟಿ,ಸಿ,)  ಆಯ್ಕೆಯಾಗಿರುವ ವಿಧ್ಯಾಥಿ೯ಗಳು ಯಾವ ಯಾವ ಪ್ರವಗ೯ಕ್ಕೆ ಸೇರಿದವರು .

(ಅವರ ಸ್ವವಿಳಾಸ ಒದಗಿಸುವುದು)

28.ಬಾಲಕಿಯರ ಪ್ರೌಢಶಾಲೆಗಳು ;- 

1034 ( 1410) ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಈ ವಿಷಯಗಳನ್ನು ದಯವಿಟ್ಟು ತಿಳಿಸುವರೆ;-

(ಅ) ರಾಜ್ಯದಲ್ಲಿರುವ ಅನುದಾನಿತ ಮತ್ತು ಶಾಶ್ವತ ಅನುದಾನರಹಿತ ಪ್ರೌಢಶಾಲೆಗಳ ಸಂಖ್ಯೆ ಎಷ್ಟು;

(ಜಿಲ್ಲಾವಾರು ಮಾಹಿತಿ ಒದಗಿಸುವುದು)

(ಆ) ರಾಜ್ಯದಲ್ಲಿರುವ ಸಹ ಶಿಕ್ಷಣ ಬಾಲಕಿಯರ ಸಕಾ೯ರಿ ಪ್ರೌಢಶಾಲೆಗಳ ಸಂಖ್ಯೆ ಎಷ್ಟು;

(ಜಿಲ್ಲಾವಾರು ಮಾಹಿತಿ ಒದಗಿಸುವುದು)

(ಇ) ಈ ಸಕಾ೯ರಿ ಪ್ರೌಢ ಶಾಲೆಗಳಲ್ಲಿ ಸ್ವಂತ ಕಟ್ಟಡ ಹೊಂದಿರುವ ಪ್ರೌಢ ಶಾಲೆಗಳು ಯಾವವು.

(ಈ) ಸಕಾ೯ರಿ ಅನುದಾನಿತ ಮತ್ತು ಶಾಶ್ವತ ಅನುದಾನರಹಿತ ಮಾಧ್ಯಮವಾರು ಪ್ರೌಢ ಶಾಲೆಗಳ ಸಂಖ್ಯೆ ಎಷ್ಟು. (ಜಿಲ್ಲಾವಾರು ಮಾಹಿತಿ ಒದಗಿಸುವುದು)

(ಉ) ಅನೇಕ ಸಕಾ೯ರಿ ಶಾಲೆಗಳಲ್ಲಿ ಗಣಿತ ಶಿಕ್ಷಕರ ಕೊರತೆ ಇರುವುದು ನಿಜವೆ? ಹಾಗಿದ್ದಲ್ಲಿ ಈ ಕೊರತೆಯನ್ನು ನಿವಾರಿಸಲು ಸಕಾ೯ರ ಕೈ ಗೊಂಡ ಕ್ರಮಗಳೇನು.

ಶಿಕ್ಷಣ ಕ್ಷೇತ್ರಕ್ಕೆ ವಿರೂಪಾಕ್ಷಪ್ಪ ನವರ ಅಮೋಘ ಕೊಡುಗೆ;-

ಶ್ರೀಮಾನ್‌ ಕೆ‌.ವಿರುಪಾಕ್ಷಪ್ಪ ನವರು ಶಿಕ್ಷಣ ಕ್ಷೇತ್ರಕ್ಕೆ ನಿಡಿದಂತಹ ಕೊಡುಗೆ ಅಂತ್ಯತ ಶ್ಲಾಘನೀಯ .ಬಡ ಮಕ್ಕಳಿಗೆ ಹಾಗೂ ಹಿಂದುಳಿದ ವಗ೯ಗಳ ವಿಧ್ಯಾಥಿ೯ಗಳಿಗೆ ಶಿಕ್ಷಣ ಸುಲಭವಾಗಿ ದೊರಕಿಸಿ ಕೊಡುವಲ್ಲಿ ವಿರುಪಾಕ್ಷಪ್ಪ ನವರ ಕೊಡುಗೆ ಅಧ್ಬುತ ವಾದದ್ದು.
ಅನೇಕ ಬಡ ವಿಧ್ಯಾಥಿ೯ಗಳ ಶುಲ್ಕವನ್ನು ಸಹಾ ತಾವೇ ಭರಿಸಿ ಅವರ ಶಿಕ್ಷಣವನ್ನು ಉಜ್ವಲಗೊಳಿಸುತ್ತಿದ್ದಾರೆ.

ಜೊತೆಗೆ ದೂರದಿಂದ ಬರುವಂತಹ ವಿಧ್ಯಾಥಿ೯ಗಳಿಗಾಗಿ ಅವರ ಅಭ್ಯಾಸಕ್ಕೆ ತೊಂದರೆಯಾಗಬಾರದೆಂದು ಉಚಿತ ಪ್ರಸಾದ ನಿಲಯವನ್ನು ಕೂಡ ಸ್ಥಾಪಿಸಿದರು.

ವಿರುಪಾಕ್ಷಪ್ಪ ನವರು ಸ್ಥಾಪನೆ ಮಾಡಿದಂತಹ ಶಾಲಾ ಕಾಲೇಜಗಳ ವಿವರ;-

1.ಕನಕದಾಸ ಮಾಂಟೆಸ್ಸರಿ ಶಾಲೆ ಸಿಂಧನೂರು.

2.ಶ್ರೀ ಕನಕದಾಸ ಪ್ರಾಥಮಿಕ ಶಾಲೆ ಸಿಂಧನೂರು.

3.ಶ್ರೀ ಕನಕದಾಸ ಪ್ರೌಢಶಾಲೆ ಸಿಂಧನೂರು.

4.ಶ್ರೀ ಕನಕ ದೀಪಾಂಜಲಿ ಪದವಿಪೂರ್ವ ಕಾಲೇಜ್ ಸಿಂಧನೂರು.

5.ಶ್ರೀ ಕನಕದಾಸ ಪ್ರೌಢ ಮತ್ತು ಪದವಿಪೂರ್ವ ಕಾಲೇಜ್ ಗಾಂಧಿನಗರ.

6. ಶ್ರೀ ಕನಕದಾಸ ಪದವಿಪೂರ್ವ ಮತ್ತು ಪದವಿ ಕಾಲೇಜ್ ತುರುವಿಹಾಳ.

7.ಶ್ರೀ ಕನಕದಾಸ ಪದವಿ ಮಹಾವಿಧ್ಯಾಲಯ ಸಿಂಧನೂರು.

8. ಶ್ರೀ ಕನಕದಾಸ ಡಿ.ಇಡಿ ಕಾಲೇಜ್ ಸಿಂಧನೂರು.

9.ಶ್ರೀ ಕನಕದಾಸ ಬಿ.ಇಡಿ ಕಾಲೇಜ್ ಸಿಂಧನೂರು.

ಬಡ ಮಕ್ಕಳು ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಹಗಲು ಇರುಳು ಎನ್ನದೆ ಶ್ರಮಿಸುತ್ತಿದ್ದಾರೆ.

ಇವರ ಈ ನಿಸ್ವಾರ್ಥ ಸೇವೆಗೆ ಇಡಿ ಹೈದ್ರಾಬಾದ್ ಕನಾ೯ಟಕ ಜನತೆ ಪ್ರಶಂಸೆ ವ್ಯಕ್ತವಾಗಿದೆ

ಈ ಮೇಲಿನ ಎಲ್ಲಾ ಮಾಹಿತಿಯನ್ನು ಫೋಟೋ ಸಮೇತ ನಮಗೆ ಅವರ ಜೀವನ ಚರಿತ್ರೆ ಮತ್ತು ಅವರ ಕಾರ್ಯದ ಬಗ್ಗೆ ಇಂಚು ಇಂಚು ಕೂಡ ಮಾಹಿತಿಯನ್ನು ಕಲೆ ಹಾಕಿದವರು ಬಸಲಿಂಗಪ್ಪ ಮತ್ತು ಅವರ ಸ್ನೇಹಿತರು ಈ ಕಾರ್ಯಕ್ಕೆ ಸ್ಫೂರ್ತಿ ಅವರ ತಂದೆ ತಾಯಿಗಳು.

ಈ ಟೀಮ್ ಗೆ ಕುರುಬಾಸ್.ಕೋ.ಇನ್  ವತಿಯಿಂದ ಶುಭಾಶಯಗಳು.

ಇಂತಿ

ದೇವರಾಜ್

ಕುರುಬಾಸ್.ಕೋ.ಇನ್

ಸಂಸ್ಥಾಪಕರು.

9900687163

ಪ್ರತಿ ರೈತರ ₹ 50 ಸಾವಿರ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬುಧವಾರ ಘೋಷಣೆ ಮಾಡಿದ್ದಾರೆ.

ಸಹಕಾರಿ ಸಂಘಗಳಲ್ಲಿ ಜೂನ್ 20 ವರೆಗೆ ಸಾಲ ಪಡೆದಿರುವ ರೈತರ ಸಾಲ ಮನ್ನಾವಾಗಲಿದೆ. ರೈತರು ಪಡೆದ ಸಾಲದಲ್ಲಿ ಗರಿಷ್ಠ 50 ಸಾವಿರ ರೂಪಾಯಿವರೆಗಿನ ಸಾಲ ಮನ್ನಾವಾಗಲಿದೆ.

ಸಾಲ ಮನ್ನಾ ಘೋಷಣೆಯಿಂದ 22.27 ಲಕ್ಷ ರೈತರಿಗೆ ಅನುಕೂಲವಾಗಲಿದ್ದು ಇದರಿಂದ ರಾಜ್ಯದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇದು ಅಲ್ಪಾವಧಿ ಅಥವಾ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡಲಾಗಿದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಕ್ಕೆ ಈ ಸಾಲಮನ್ನಾ ಅನ್ವಯಿಸುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ

ಸಿದ್ದರಾಮಯ್ಯ ಸರಕಾರದ ಸಾಲ ಮನ್ನಾಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ‘ಮುಂದಿನ ಸರಕಾರಕ್ಕೆ ಹೊರೆ ಉಳಿಸಿ ಹೋಗುವುದು ಬೇಡ. ಈ ಸರಕಾರದ ಅವಧಿಯಲ್ಲೇ ಬ್ಯಾಂಕುಗಳಿಗೆ ಹಣ ಪಾವತಿಸಲಿ,’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಹಿನ್ನಲೆಯಲ್ಲಿ ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ರೈತರ ಸಾಲ ಮನ್ನಾ ನಿರ್ಧಾರ ತೆಗೆದುಕೊಂಡಿರುವುದ ಸ್ವಾಗತಾರ್ಹ. ಆದರೆ ಇದಕ್ಕಾಗಿ ಸರಕಾರ ಹಿಗ್ಗುವ ಅಗತ್ಯವಿಲ್ಲ. ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ನಮ್ಮ ಒತ್ತಾಯಗಳಿಗೆ ಸಿದ್ದರಾಮಯ್ಯ ಮಣಿದಿದ್ದಾರೆ,’ ಎಂದು ಅವರು ಹೇಳಿದ್ದಾರೆ

ಇದೇ ವೇಳೆ ಸಾಲ ಮನ್ನಾ ನಿರ್ಧಾರ ಸ್ವಾಗತಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕೇಂದ್ರವೂ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ‘ರೈತರ ಸಾಲಮನ್ನಾ ಸ್ವಾಗತಾರ್ಹ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ 1-2 ಲಕ್ಷವರೆಗಿನ ಸಾಲ ಮನ್ನಾ ಮಾಡಿದ್ದರೆ ನಮ್ಮಲ್ಲಿ ಕೇವಲ 50,000 ರೂಪಾಯಿವರೆಗಿನ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಸರಕಾರ ಸಾಲ ಮನ್ನಾದ ಮಿತಿ ಹೆಚ್ಚಿಸಲಿ,’ ಎಂದಿದ್ದಾರೆ. ಕರ್ನಾಟದಲ್ಲಿ ಸಹಕಾರಿ ಬ್ಯಾಂಕುಗಳ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಕೇಂದ್ರ ಸರಕಾರವೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಸರಕಾರದ ಸಾಲಮನ್ನಾ ಸ್ವಾಗತಾರ್ಹ. ಆದರೆ ಇದಕ್ಕೆ ಸರಕಾರ ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ. ಸಾಲ ಮನ್ನಾಕ್ಕೆ ನಾವೂ ಒತ್ತಾಯಿಸಿದ್ದೆವು. ಈಗ ಕೇಂದ್ರ ಸರಕಾರ ಸಾಲ ಮನ್ನಾ ಮಾಡಲಿ,’ ಎಂಬುದು ಜೆಡಿಎಸ್ ನಾಯಕ ಎನ್.ಎಚ್ ಕೋನರೆಡ್ಡಿ ಹೇಳಿಕೆ. ಈ ಕುರಿತು ಬಿಜೆಪಿಗೆ ಹೆಚ್ಚಿನ ಜವಾಬ್ದಾರಿ ಇದೆ. ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಈ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳೂ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ಬಿಗ್ ಬ್ರೇಕಿಂಗ್: ‘ವೀಕೆಂಡ್’ ಸಾಧಕರ ಸೀಟಿನಲ್ಲಿ ನಾಡದೊರೆ ಮುಖ್ಯಮಂತ್ರಿ  ಶ್ರೀ ಸಿದ್ದರಾಮಯ್ಯ

posted by devaraj BEEREGOWDA

ನಮ್ಮ ಹೆಮ್ಮೆ ನಮ್ಮ ಸಿದ್ದರಾಮಯ್ಯ

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಮೂರನೇ ಆವೃತ್ತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಈ ಬಾರಿ ವಿಭಿನ್ನ ಕ್ಷೇತ್ರಗಳ ಹಲವು ಸಾಧಕರನ್ನ ಸಾಧಕರ ಕುರ್ಚಿಯಲ್ಲಿ ಕೂರಿಸಿದ್ದ ಜೀ ಕನ್ನಡ ಈಗ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಅತಿಥಿಯಾಗಿಸಲಿದೆ.
ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ವೀಕಂಡ್ ಸಾಧಕರ ಸೀಟಿನಲ್ಲಿ ಕೂತಿದ್ದರು. ಈ ಎಪಿಸೋಡ್ ಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಮತ್ತು ಪ್ರಶಂಸೆ ಸಿಕ್ಕಿತ್ತು. ಈಗ ರಾಜ್ಯದ ಮುಖ್ಯಮಂತ್ರಿ ಅವರನ್ನ ಕರೆತರುವ ಮೂಲಕ ಮತ್ತೊಂದು ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುತ್ತಿದೆ.

ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರ

ಹಾಗಾದ್ರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತೆ? ಯಾವಾಗ ರೆಕಾರ್ಡಿಂಗ್ ಆಗುತ್ತೆ? ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಮುಂದಿದೆ ನೋಡಿ…..

SIDDU

our cm

‘ವೀಕೆಂಡ್ ವಿತ್ ರಮೇಶ್-3’ ಕಾರ್ಯಕ್ರಮ ಕೊನೆಯ ಹಂತದಲ್ಲಿದ್ದು, ಕೊನೆಯ ಮೂರು ವಾರಗಳು ಮಾತ್ರ ಪ್ರಸಾರವಾಗಲಿದೆ. ಈಗ ಸಿಕ್ಕಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಾರದ ಅತಿಥಿಯಾಗಲಿದ್ದಾರಂತೆ.

ಜೂನ್ 22 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ರೆಕಾರ್ಡಿಂಗ್ ನಡೆಯಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೂ ರೆಕಾರ್ಡಿಂಗ್ ನಡೆಯಲಿದೆಯಂತೆ.

King Siddaramaiah

ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ಎಪಿಸೋಡ್ ನಲ್ಲಿ ಅವರ ಪತ್ನಿ ಪಾರ್ವತಮ್ಮ ಭಾಗಿಯಾಗುವ ಸಾಧ್ಯತೆ ಇದೆಯಂತೆ. ಇದುವರೆಗೂ ಸಾರ್ವಜನಿಕವಾಗಿ ಪಾರ್ವತಮ್ಮ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಆದ್ರೆ, ಈ ಕಾರ್ಯಕ್ರಮಕ್ಕಾಗಿ ವೇದಿಕೆ ಹತ್ತಲಿದ್ದಾರಂತೆ.
ಮತ್ತೊಂದೆಡೆ ಈ ಕಾರ್ಯಕ್ರಮದ ಬಗ್ಗೆ ಸಿದ್ದರಾಮಯ್ಯ ಅವರ ‘ಟಿಪಿ’ಯಲ್ಲೂ ನಮೂದಾಗಿದ್ದು, ಕೆಲವು ಸಚಿವರು, ಶಾಸಕರು ಹಾಗೂ ಗೆಳಯರಿಗೆ ಆಹ್ವಾನ ನೀಡಲಾಗಿದೆಯಂತೆ.

ಅಂದ್ಹಾಗೆ, ಸಿದ್ದರಾಮಯ್ಯ ಅವರಿಗೆ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಷ್ಟವಿರಲಿಲ್ಲವಂತೆ. ಆದ್ರೆ, ಗೆಳೆಯರ ಒತ್ತಾಯ ಮೆರೆಗೆ ಸಾಧಕರ ಸೀಟಿನಲ್ಲಿ ಕೂರಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಬಾಲ್ಯ, ರಾಜಕೀಯ ಜರ್ನಿ, ರಾಕೇಶ್ ಅವರ ಸಾವು, ಹೀಗೆ ಪ್ರತಿಯೊಂದು ವಿಷ್ಯಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ.

ನಟಿ ಶ್ರುತಿ ಅವರು ಎಪಿಸೋಡ್ ಇಂದು (ಜೂನ್ 17) ಮತ್ತು ಹಿರೆಮಗಳೂರು ಕಣ್ಣನ್ ಅವರ ಎಪಿಸೋಡ್ ನಾಳೆ (ಜೂನ್ 18) ಪ್ರಸಾರವಾಗಲಿದೆ. ಮುಂದಿನ ವಾರ ಅಂದ್ರೆ ಜೂನ್ 24 ಮತ್ತು 25 ರಂದು ಸಿದ್ದರಾಮಯ್ಯ ಅವರ ಎಪಿಸೋಡ್ ಪ್ರಸಾರ ಮಾಡಲು ನಿರ್ಧರಿಸಲಾಗಿದೆಯಂತೆ.
#ಶೇರ್ ಮಾಡಿ 

https://youtu.be/hJukZS65S0c

ಕುರುಬರ ಕಣ್ಮಣಿ ಯುವ ನೇತಾರ ಹಿಂದುಳಿದ ವರ್ಗಗಳ ನಾಯಕ ಬಡವರ ಬಂಧು, ಮಾಜಿ ಸಚಿವ ಶ್ರೀ ಬಂಡೆಪ್ಪ ಕಾಶಂಪುರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಜೆಡಿಸ್ ಪಕ್ಷದಲ್ಲಿ ಮಿಂಚಿನಂತೆ ಮೀನುಗುತ್ತಿರುವ ನಮ್ಮ ಹೆಮ್ಮೆಯ ನಾಯಕರು…! 🎂🎂

ಸಮಾಜದ ಅಭಿವೃದ್ಧಿಗಾಗಿ ಶೆಫೇರ್ಡ್ ಐಟಿಬಿಟಿ ಯುವಕರು ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಬಿ. ಕೆ. ರವಿ ಅವರನ್ನು ಸನ್ಮಾನಿಸಿ ಗೌರವಿಸಿದರು.(kurubas.co.in)

 ಸಮಾಜಕ್ಕಾಗಿ ಶೆಫೇರ್ಡ್ ಇಂಡಿಯಾ ಐಟಿಬಿಟಿ ಯುವಕರ ಪಡೆ

          ಬೆಂಗಳೂರು ಮತ್ತು ಐಟಿ ಬಿಟಿಗಳಲ್ಲಿ ಇಂಗ್ಲಿಷ್ ಸಂವಹನದ ಕೊರತೆಯಿಂದಾಗಿ ಪ್ರತಿಭೆ ಇದ್ದರು ಕರ್ನಾಟಕದ ಹಲವಾರು ಹಿಂದುಳಿದ ಪ್ರತಿಭಾವಂತ ವಿದ್ಯಾವಂತ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಸರಕಾರ ಕೊಡುವ ಅನೇಕ ಸಬ್ಸಿಡಿಗಳನ್ನು ಪಡೆದುಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ಮಾತ್ರ ನಮ್ಮ ಪ್ರತಿಭೆಗಳಿಗೆ ಇದೊಂದೆ ಕಾರಣವನ್ನು ಮುಂದಿಟ್ಟುಕೊಂಡು ಅವಕಾಶ ಕೊಡದೆ ಅರಳಿ ನಿಂತ ಹೂಗಳಿಗೆ ನೋವು ನೀಡುತ್ತಲೆ ಬರುತ್ತಿವೆ. ಅದರಲ್ಲಿಯು ತೀರ ಹಿಂದುಳಿದ ಪ್ರದೇಶಗಳ ಯುವಕ/ಯುವತಿಯರ ಗೋಳು ಕೇಳುವವರೆ ಇಲ್ಲ ! , ಒಂದು ಕಡೆ ಬಹುರಾಷ್ಟ್ರೀಯ ಕಂಪೆನಿಗಳು ಈ ಪ್ರತಿಭಾವಂತ ಯುವಕ/ಯುವತಿಯರಿಗೆ ನುಂಗಲು ಆಗದ ಉಗಿಯಲು ಆಗದ ಬಿಸಿ ತುಪ್ಪದಂತೆ ಆಗಿವೆ. ದಿನೇ ದಿನೇ ಈ ಕಂಪೆನಿಗಳು ಸಂದರ್ಶನದ ಹೆಸರಿನಲ್ಲಿ ನಮ್ಮ ಯುವಕ ಯುವತಿಯರಲ್ಲಿ ಒತ್ತಡ ಬಿತ್ತುತ್ತಿವೆ.

ಈ ರೀತಿಯ ಅನೇಕ ಉದಾಹರಣೆಗಳನ್ನು ಕಣ್ಣಾರೆ ನೋಡಿದ ಸ್ವತಃ ಐಟಿ ಉದ್ಯೋಗಿಯಾಗಿರುವ ಅಶೋಕ ಹಟ್ಟಿಯವರು ಮತ್ತು ಅವರ ತಂಡ ಅವಕಾಶದಿಂದ ವಂಚಿತರಾಗುತ್ತಿರುವ ಪ್ರತಿಭಾವಂತ ವಿದ್ಯಾವಂತರಿಗೆ ಏನಾದರು ಮಾಡಬೇಕು “ಶೆಫೇರ್ಡ್ ಇಂಡಿಯಾ ಐಟಿ ಬಿಟಿ ಸಂಘ” ಎಂದು ಪ್ರಾರಂಬಿಸಿದರು.

ಇತ್ತೀಚೆಗೆ ವಿಶ್ವೇಶ್ವರೈಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್‌ ಮತ್ತು ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯರಾಗಿ ಆಯ್ಕೆಯಾಗಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಪ್ರೊ: ಡಾ. ಬಿ ಕೆ ರವಿಯವರನ್ನು – ಅಶೋಕ ಹಟ್ಟಿ ಮತ್ತು ಅವರ ಶೆಫೇರ್ಡ್ ಇಂಡಿಯಾ ಐಟಿಬಿಟಿ ತಂಡ  (ಸಿದ್ದಪ್ಪ ಲಾಳಿ, ಪ್ರಶಾಂತ್ ಶಲವಡಿ, ಸುರೇಶ್ ಪೂಜಾರಿ, ಅವಿನಾಶ್,ಚೇತನ್, ರಮೇಶ್, ಗಿರೀಶ್ ಮತ್ತು ಮೋಹನ್) ಸತ್ಕರಿಸಿ ಶುಭಹಾರೈಸಿದರು,

           ಈ ಸಂಧರ್ಬದಲ್ಲಿ ಪ್ರೊ ಬಿ ಕೆ ರವಿರವರು ಮಾತನಾಡಿ ಶೆಫೇರ್ಡ್ ಇಂಡಿಯಾ ಐಟಿಬಿಟಿ ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಸಮಾಜಕ್ಕೆ ವಿದ್ಯಾವಂತ ಯುವಕರ ಪಾತ್ರ ಬಹುದೊಡ್ಡದು ಮತ್ತು ಇಂತಹ ಸಂಘಟನೆಗಳಲ್ಲಿ ವಿದ್ಯಾವಂತ ಯುವಕರು ಹೆಚ್ಚಿನ ಸಂಖೆಯಲ್ಲಿ ತೊಡಗಿಕೊಳ್ಳಬೇಕು , ಮುಂದಿನ ದಿನ ಮಾನಗಳಲ್ಲಿ ಯಾವುದೇ ರೀತಿಯ ತಾಂತ್ರಿಕ ಮತ್ತು ಐಟಿ ಬಿಟಿ ಕ್ಷೇತ್ರದಲ್ಲಿ ಸಹಾಯವನ್ನು ಮಾಡುವದಾಗಿ ಭರವಸೆ ನೀಡಿದರು

                ಹಿಂದುಳಿದ ಪ್ರದೇಶಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿಯೇ ಅನೇಕ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಿಗೆ ಇಂಗ್ಲಿಷ್ ಭಾಷ ಸಂವಹನ ಮತ್ತು ಐಟಿ ಉದ್ಯೋಗಕ್ಕೆ ಬೇಕಾದ ಸರಿಯಾದ ತರಬೇತಿಯನ್ನು ನೀಡಿದ ಕಾರಣದಿಂದಾಗಿ ಇಂದು ಹಲವಾರು ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಿಂದ ಬಂದು ಪ್ರತಿಭಾವಂತರಾದರು ಕೆಲಸ ಪಡೆದುಕೊಳ್ಳಲು ಕಷ್ಟ ಪಡುತ್ತಿದ್ದ ಅಭ್ಯರ್ಥಿಗಳು ಇಂದು ಐಟಿ ಉದ್ಯೋಗಿಗಳಾಗಿದ್ದಾರೆ.ಇದೇ ರೀತಿಯಾಗಿ ಹಿಂದುಳಿದ ವರ್ಗಗಳ ಇಲಾಖೆಗಳಿಂದ ಕೊಡಮಾಡುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಹಲವು ವಿಧ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯುವಂತೆ ಮಾಡಿದ್ದಾರೆ. 

ಇದಲ್ಲದೆ ಸಮಾಜದ ದೇಶ ವಿದೇಶಗಳಲ್ಲಿರುವು ಐಟಿ ಮತ್ತು ಇತರೆ ಉದ್ಯೋಗಿಗಳನ್ನು ಒಂದುಗೂಡಿಸಿ ಶೆಪರ್ಡ್ ಎನ್ಆರ್ಐ ಸಂಘಟನೆಯಲ್ಲಿ ತೊಡಗಿದ್ದಾರೆ, ಇದರ ಮೂಲಕ ಸಮಾಜದ ಎಲ್ಲ ವಿದ್ಯಾವಂತರು ಜಗತ್ತಿನಾದ್ಯಂತ ಗುರುತಿಸಲಿ ಎನ್ನುವುದೇ ಇವರ ಬಹು ದೊಡ್ಡ ಆಸೆಯಾಗಿದೆ

 ಇವರ ಸೇವೆ ಹಿಂದುಳಿದ ವರ್ಗಗಳಿಗೆ ಸೀಮಿತವಾಗದೆ ಎಲ್ಲ ಕನ್ನಡಿಗರಿಗೂ ಉದ್ಯೋಗಾವಕಾಶ ದೊರೆಯಬೇಕೆಂದು “ಕನ್ನಡ ವಿಶ್ವ ಐಟಿ ಬಿಟಿ” ವಾಟ್ಸ್ ಗ್ರೂಪ್ನ್ನು ಸ್ಟಾಪಿಸಿ, ಅಲ್ಲಿಯೂ ಕನ್ನಡಿಗರಿಗೆ ಉದ್ಯೋಗ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದಿನ ದಿನಮಾನಗಳಲ್ಲಿ ಐಟಿ ಉದ್ಯೋಗ ಎನ್ನುವುದು ಕೇವಲ ಹಣ ಮಾಡಲು ಮಾತ್ರ, ಸಮಾಜಕ್ಕು ನಮಗು ಸಂಬಂಧವೆ ಇಲ್ಲ ಅನ್ನುವ ರೀತಿ ವರ್ತಿಸುವ ಅನೇಕ ಐಟಿ ಉದ್ಯೋಗಿಗಳ ನಡುವೆ ಇಂತವರು ಕಾಣಸಿಗುವುದು ತುಂಬಾ ತುಂಬಾ ಅಪರೂಪ. ಇಂತವರ ಬೆಳಗುವ ದೀಪಗಳ ಸಂಖ್ಯೆ ಸಾವಿರವಾಗಲಿ ಇವರ ಈ ಕೆಲಸ ಹೀಗೆ ಮುಂದುವರೆಯಲಿ.

ಈ ಯುವಕರ ಪಡೆಗೆ ನಿಮ್ಮ್ ಬೆಂಬಲ ಅತ್ಯವಶ್ಯ – ನಿಮ್ಮ ಬೆಂಬಲ/ಸಲಹೆ/ ಅಭಿಪ್ರಾಯವನ್ನು ತಿಳಿಸಿ             

+91 8050907473/+91 8147321372/+91 9035606907/+31 625277212

ಪಿರಿಯಾಪಟ್ಟಣ ಅಹಿಂದ ನಾಯಕ ಹಾಲುಮತ (ಕುರುಬ) ಸಮಾಜದ ನೇತಾರ,ಹೆಚ್.ಡಿ ಗಣೇಶ್ (ಮುಂದಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿ) ನಿಮ್ಮ ಕುರುಬಾಸ್.ಕೋ.ಇನ್ ವಿಶೇಷ ವರದಿಯಲ್ಲಿ /kurubas.co.in  


ಪಿರಿಯಾಪಟ್ಟಣ ತಾಲೂಕಿನಲ್ಲಿ ಅಹಿಂದ ಸಮುದಾಯದಿಂದ ಸ್ವರ್ಧಿಸುವ ಅಭ್ಯರ್ಥಿ ಕೊರೆತೆಯಿದ್ದಂತಹ ಸಂದರ್ಭದಲ್ಲಿ ತಾಲೂಕಿನ ಜನತೆಯ ಎದುರು ಪ್ರತ್ಯಕ್ಷವಾದ ನಾಯಕನೇ ಹೆಚ್.ಡಿ ಗಣೇಶ್

ಹೆಚ್.ಡಿ ಗಣೇಶ್ ಅವರು 1959 ರಲ್ಲಿ ಜನಿಸಿದ್ದು ಹಾಲುಮತ (ಕುರುಬ) ಸಮುದಾಯಕ್ಕೆ ಸೇರಿದವರಾಗಿದ್ದು, ಪಿರಿಯಾಪಟ್ಟಣ ತಾಲೂಕಿನ ವೇದಾಕ್ಷಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಹೆಚ್.ಡಿ ಗಣೇಶ್ ನಿರಂತರವಾಗಿ 1999 ರಿಂದ ಸಾರ್ವಜನಿಕ ಸಂಪರ್ಕದಲ್ಲಿದ್ದು ಬಡ ವಿದ್ಯಾರ್ಥಿಗಳಿಗೆ , ಬಡ ರೈತರಿಗೆ ಸಹಾಯ ಮಾಡುತ್ತ ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಯನ್ನು ನೀಡಿ, ಲೋಡರ್ಸ್ ಮತ್ತು ರಸ್ತೆ ಬದಿ ವ್ಯಾಪಾರಿಗಳಿಗೆ ತನ್ನ ಸ್ವಂತ ಹಣದಿಂದ ಗುಂಪು ಜೀವವಿಮೆ ಮಾಡಿಸಿಕೊಟ್ಟಿರುವುದಲ್ಲದೆ ಪ್ರೀಮಿಯಂ ಹಣವನ್ನು ಸ್ವಂತ ಹೆಚ್.ಡಿ ಗಣೇಶ್ ಅವರೇ ಭರಿಸಿದ್ದಾರೆ, ತಾಲೂಕಿನಲ್ಲಿರುವ ಸುಮಾರು 150 ಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದ್ದಾರೆ.

ಸುಮಾರು 100ಕ್ಕೂ ಹೆಚ್ಚು ಸಾಮೂಹಿಕ ಮದುವೆ ಮಾಡಿಸಿಕೊಟ್ಟಿರುವುದಲ್ಲದೆ ಅವರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದಾರೆ, ಜೊತೆಗೆ ಸುಮಾರು 50 ಕ್ಕೂ ಹೆಚ್ಚು ವೃದ್ಧೆಯರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ , ಕಾನ್ಸರ್ ಪೀಡಿತ ರೋಗಿಗಳಿಗೆ ಸಹಾಯ ಹಸ್ತ ನೀಡಿದ್ದಾರೆ ಇಷ್ಟೆಲ್ಲ ಸಹಾಯ ನೀಡಿದ್ದರು ಸಹ ಎಲ್ಲಿಯೂ ಪ್ರಚಾರ ತೆಗೆದುಕೊಳ್ಳಲು ಮುಂದಾಗಿಲ್ಲ.

ಪಿರಿಯಾಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನವನ್ನು  ಸ್ವಂತ ತನ್ನ ಹಣದಿಂದ ಕಟ್ಟಿಸಿ ಆ ದೇವಸ್ಥಾನಕ್ಕೆ ಅರ್ಚಕರನ್ನು ನೇಮಿಸಿ ಅರ್ಚಕರಿಗೆ ಸಂಬಳವನ್ನು ಸ್ವತಃ ಹೆಚ್.ಡಿ ಗಣೇಶ್ ಅವರೇ ನೀಡುತ್ತಾ ಬರುತ್ತಿರುವುದು ಕ್ಷೇತ್ರದ ಜನತೆಗೆ ತಿಳಿದಿರುವ ವಿಷಯ.

ಯಾವುದೇ ಅಧಿಕಾರವಿಲ್ಲದೆ ಸ್ವಂತ ದುಡಿಮೆಯಿಂದ ಸಂಪಾದಿಸಿದ ಹಣವನ್ನು ಬಡ ಸಾರ್ವಜನಿಕರ ಕಷ್ಟದ ದಿನಗಳಲ್ಲಿ ಬಾಗಿಯಾಗಿ ನಿರಂತವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ ಸಹೃದಯಿಯಾಗಿಯೇ ಹೆಚ್.ಡಿ ಗಣೇಶ್ ಉಳಿದು ಬಿಟ್ಟರು, ಅಧಿಕಾರ, ಹಣ ,ಆಸ್ತಿ ಸಂಪಾದನೆ ಮಾಡಬೇಕೆಂಬ ಸ್ವಾರ್ಥವಿಲ್ಲದ ರಾಜಕಾರಣಿ ನಮ್ಮ ಹೆಮ್ಮೆಯ ನಾಯಕರು ಹೆಚ್.ಡಿ ಗಣೇಶ್

ಹೆಚ್.ಡಿ ಗಣೇಶ್ ರವರ ರಾಜಕೀಯ ಪಾದಾರ್ಪಣೆ ಮತ್ತು ಪಕ್ಷ ಸಂಘಟನೆ. 

ಬಿಜೆಪಿ ಪಕ್ಷದಲ್ಲಿ ಸ್ಪರ್ಧಿಸಿ ಶಾಸಕರಾಗಿ ಹೆಚ್.ಸಿ ಬಸವರಾಜ್ ಬಿ.ಜೆ.ಪಿ ಪಕ್ಷ ಬಿಟ್ಟು ಹೋದ ನಂತರ ತಾಲೂಕಿನ ಬಿಜೆಪಿ ನಾಯಕನಿಲ್ಲದೆ ಪಕ್ಷ ಸಂಘಟನೆಯಲ್ಲಿ ಹಿನ್ನಡೆಯಾಗುತ್ತಿರುವ ಸಂಧರ್ಭದಲ್ಲಿ ಹಾಗೂ ಬಿಜೆಪಿ ಕಚೇರಿಗೆ ಬಾಡಿಗೆ ಕಟ್ಟಲು ಸಹಾ ಯಾರು ಇಲ್ಲದ ಸಂದರ್ಭದಲ್ಲಿ ಸಮಾಜಸೇವೆ ಮಾಡುತ್ತಿದ್ದ , ಹೆಚ್.ಡಿ ಗಣೇಶ್ ರವರನ್ನು ಭೇಟಿ ಮಾಡಿ ಬಿಜೆಪಿ ಪಕ್ಷದ ಸ್ಥಿತಿಗತಿಗಳ ಬಗ್ಗೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹೆಚ್.ಡಿ ಗಣೇಶ್ ರವರಿಗೆ ಮನವರಿಕೆ ಮಾಡಿಕೊಟ್ಟು ಬಿಜೆಪಿ ಪಕ್ಷಕ್ಕೆ ಕರೆತಂದು ಪಕ್ಷವನ್ನು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಪಕ್ಷದ ಬಲವರ್ಧನೆಗೆ ಪಣ ತೊಟ್ಟಿದ ನಾಯಕ ಹೆಚ್.ಡಿ ಗಣೇಶ್ 2004 ರಲ್ಲಿ ಹಾಗೂ 2008 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ಹೆಚ್.ಡಿ ಗಣೇಶ್ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಸ್ ಪಕ್ಷದ ಅಭ್ಯರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಿ ಸುಮಾರು 30000 ಸಾವಿರ ಮತಗಳನ್ನು ಪಡೆಯುವುದರ ಮುಖಾಂತರ ಇತರೆ ಪಕ್ಷದ ಅಭ್ಯರ್ಥಿಗಳಿಗೆ ನಡುಕ ಉಂಟುಮಾಡಿದನ್ನು ಕ್ಷೇತ್ರದ ಜನರು ಮರೆಯುವುದಿಲ್ಲ. ನಂತರ 2012 -2103 ಸಾಲಿನಲ್ಲಿ ರಾಜ್ಯಮಟ್ಟದ ಬಿಜೆಪಿ ನಾಯಕರುಗಳಲ್ಲಿ ಮನಸ್ತಾಪ ಉಂಟಾಗಿ ಬದಲಾದ ರಾಜಕೀಯ ಪರಿಸ್ಥಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕೆ.ಜೆ.ಪಿ ಪಕ್ಷ ಹಾಗೂ ಮಾಜಿ ಸಚಿವ ಶ್ರೀರಾಮಲು ನೇತೃತ್ವದ ಬಿ.ಎಸ್.ಆರ್ ಕಾಂಗ್ರೆಸ್ ಹೀಗೆ ಬಿಜೆಪಿ ಪಕ್ಷ  ಮೂರು ಪಕ್ಷಗಳಾಗಿ ಇಬ್ಭಾಗವಾಯಿತು. 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷದಿಂದ ಹೆಚ್.ಸಿ. ಬಸವರಾಜ್ , ಶ್ರೀರಾಮಲು ನೇತೃತ್ವದ ಬಿ. ಎಸ್.ಆರ್. ಕಾಂಗ್ರೆಸ್ ಪಕ್ಷದಿಂದ ಹೆಚ್.ಡಿ ಗಣೇಶ್ ಬಿಜೆಪಿ ಪಕ್ಷದಿಂದ ಸಣ್ಣಮೊಗೇಗೌಡ , ಕಾಂಗ್ರೆಸ್ ಪಕ್ಷದಿಂದ ಕೆ. ವೆಂಕಟೇಶ್ ಮತ್ತು ಜೆಡಿಸ್ ಪಕ್ಷದಿಂದ ಕೆ.ಮಹದೇವ್ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹೆಚ್.ಡಿ ಗಣೇಶ್  ಭರ್ಜರಿ ಗೆಲುವು ಸಾಧಿಸಿಲಿದ್ದಾರೆ ಎಂಬ ಮಾಹಿತಿಯನ್ನು ಕೆಲ ಮಾಧ್ಯಮಗಳು ವರದಿ ಮಾಡಿದ್ದವು ದುರದೃಷ್ಟವಶಾತ್ ಆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಸಣ್ಣಮೊಗೇಗೌಡ ಅವರ ಅಕಾಲಿಕ ನಿಧನ ಪರಿಣಾಮ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ 223 ಕ್ಷೇತ್ರದ ಚುನಾವಣೆ ನಡೆಯಿತು. ಒಂದು ತಿಂಗಳ ನಂತರ ನಡೆಯಬೇಕಿದ್ದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆ ಬರುವಷ್ಟರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಿತು.ಇದೆ ಸಂದರ್ಭದಲ್ಲಿ ಅಹಿಂದ ನಾಯಕ ಶ್ರೀ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದರು. ಇದಕ್ಕೆ ಪ್ರಮುಖ ಕಾರಣ ಬಿಜೆಪಿ ಪಕ್ಷದ ರಾಜ್ಯಮಟ್ಟ ನಾಯಕರ ಒಳ ಜಗಳ ಮತ್ತು ವೈಮನಸ್ಸು ಅದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರ ಅಹಿಂದ ಶಕ್ತಿ.


ಮುಂದೆ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ಡಿ  ಚುನಾವಣೆ ಸಮರ ಎದುರಾಯಿತು, ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅಗಿದ್ದ ಅಹಿಂದ ನಾಯಕ ಶ್ರೀ ಸಿದ್ದರಾಮಯ್ಯ ತನ್ನ ಪಕ್ಷದ ಅಭ್ಯರ್ಥಿಯನ್ನು ತನ್ನ ತವರು ಜಿಲ್ಲೆಯಲ್ಲಿ ಗೆಲ್ಲಿಸಿಕೊಳ್ಳಲು ತಾವೇ ಖುದ್ದಾಗಿ ಅಖಾಡಕ್ಕೆ ಇಳಿದರು. ಅಲ್ಲದೆ ತಮ್ಮ ಜೊತೆ ಇಡೀ ಸಚಿವ ಸಂಪುಟವೆನ್ನೆ ಕರೆತಂದು ಒಂದು ಮಿನಿ ರಣರಂಗವನ್ನೇ ಸೃಷ್ಟಿಸಿದರು ಮತ್ತು “ಈ ಚುನಾವಣೆ ನನ್ನ ಪ್ರತಿಷ್ಠೆಯ ಚುನಾವಣೆಯಾಗಿದ್ದು ಸಮಾಜದ ಬಂಧುಗಳು ಮತ್ತು ಅಹಿಂದ ವರ್ಗಗಳು ನಮಗೆ ಬೆಂಬಲ ನೀಡಿ” ಎಂದು ತಾವೇ ಮತ ಯಾಚಿಸಿದರು, ಇದೆಲ್ಲವೂ ಬಿ. ಎಸ್. ಆರ್. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಅಹಿಂದ ಸಮುದಾಯದ ಪ್ರಭಾವಿ ಹೆಚ್.ಡಿ ಗಣೇಶ್ ಅವರಿಗೆ ಹಿನ್ನಡೆಯಾಯಿತು. ಜೊತೆಗೆ ಅಷ್ಟರಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು “ಆಪರೇಷನ್ ಕಾಂಗ್ರೇಸ್”ಮಾಡಿ ಕೆಜೆಪಿ ಅಭ್ಯರ್ಥಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುಬಿಟ್ಟರು . ಜೊತೆಗೆ ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ಗಣೇಶ್ ಚುನಾವಣೆಯಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲಿಸಿದ್ದಾರೆಂದು ಸುಳ್ಳು ಪ್ರಚಾರಮಾಡಿ ತಮ್ಮ ಗೆಲುವಿಗೆ ಬೇಕಾದ ಎಲ್ಲಾ ತಂತ್ರಗಳನ್ನು  ಕಾಂಗ್ರೆಸ್ ಪಕ್ಷದ ಮುಖಂಡರು ಸೃಷ್ಟಿಸಿಕೊಂಡರು. ಇಷ್ಟೆಲ್ಲಾ ಬೆಳವಣಿಗೆಗಳು ನೆಡೆಯದಿದ್ದರೆ ಹಾಗೂ ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡ ನಿಧನವಾಗದಿದ್ದರೆ ಬಿ. ಎಸ್. ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಹಿಂದ ನಾಯಕ ಹೆಚ್.ಡಿ ಗಣೇಶ್ ಅವರ ಗೆಲುವು ಖಚಿತವಾಗುತ್ತಿತ್ತು . 


ಮಾಧ್ಯಮಗಳ ಸಮೀಕ್ಷೆ ಪ್ರಕಾರ ಹೆಚ್.ಡಿ ಗಣೇಶ್ ಪಿರಿಯಾಪಟ್ಟಣ ತಾಲೂಕಿನ ಶಾಸಕರಾಗುತ್ತಾರೆಂದು ಮಾಹಿತಿ ಬಿತ್ತರ ಮಾಡಿದ್ದವು ಇದನ್ನ ಮನಗಂಡ ಕೆಲ ಕಾಂಗ್ರೆಸ್ ನ ಕುತಂತ್ರಿ ರಾಜಕಾರಣಿಗಳು ಭಯಬೀತರಾಗಿ ಗಣೇಶ್ ಅವರ ಮನೆಗೆ ಓಡಿ ಬಂದರು,ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಂದಿನ ಮೈಸೂರು ಮತ್ತು ಕೊಡಗು ಸಂಸದ ಹೆಚ್.ವಿಶ್ವನಾಥ್ ಮತ್ತು ಗಣೇಶ್ ಅವರ ರಾಜಕೀಯ ಗುರುಗಳಾದ ಟಿ. ಜಾನ್ ರವರಿಗೆ ಜವಾಬ್ಧಾರಿ ನೀಡದರು, ಅದರಂತೆ  ಗಣೇಶ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಬಂದಿದ್ದ ಹೆಚ್.ವಿಶ್ವನಾಥ್ ಮತ್ತು ಟಿ. ಜಾನ್ ರವರ ಸಂಧಾನ ಯಶಸ್ವಿಯಾಗಲಿಲ್ಲ , ಕೊನೆಗೆ ಸ್ವತಃ ಹೆಚ್. ಡಿ ಗಣೇಶ್ ಅವರೇ ಚುನಾವಣೆಯಿಂದ ಹಿಂದೆ ಸರಿದರೋ ಅಥವಾ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಸುಳ್ಳು  ಅಪಪ್ರಚಾರವೋ ಕ್ಷೇತ್ರದ ಜನತೆಗೆ ಇದು ಪಶ್ನೆ ಯಾಗಿಯೇ ಉಳಿದು ಬಿಟ್ಟಿತು. ಆದರೆ 2013 ರ ಚುನಾವಣೆಯಲ್ಲಿ ಹೆಚ್.ಡಿ ಗಣೇಶ್ ಅವರು ಶಾಸಕರಾಗುವುದು ಖಚಿತ ಮಾಹಿತಿ ಇಡೀ ರಾಜ್ಯದ ಜನತೆಗೆ ತಿಳಿದಿತ್ತು. ಒಂದು ಕಡೆ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಚುನಾವಣೆಯಾದರೆ ಇನ್ನೊಂದೆಡೆ ಬಿಜೆಪಿ ಪಕ್ಷ ಮೂರು ಪಕ್ಷಗಳಾಗಿ ಇಬ್ಬಾಗವಾಗಿದ್ದು ಮತ್ತೊಂದೆಡೆ ಗಣೇಶ್ ಅವರು ಕಾಂಗ್ರೆಸ್ ಬೆಂಬಳಿಸಿದ್ದಾರೆ ಎಂಬ ಸುಳ್ಳು ಪ್ರಚಾರ ಹೆಚ್.ಡಿ ಗಣೇಶ್ ಅವರಿಗೆ ಹಿನ್ನಡೆಯಾಗಲು ಕಾರಣವಾಯಿತು. ಇಷ್ಟೆಲ್ಲಾ ಬೆಳವಣಿಗೆಗಳು ನೆಡೆಯದಿದ್ದರೆ ಹೆಚ್.ಡಿ ಗಣೇಶ್ 2013ರ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಶಾಸಕರಾಗುವುದು ಖಚಿತವಾಗಿತ್ತು, ಜೊತೆಗೆ ರಾಜಕೀಯವಾಗಿ ತುಳಿಯುವ ಪ್ರಯತ್ನ ಮತ್ತು ವ್ಯವಸ್ಥಿತ ಸಂಚು ಸಹ ನಡೆದಿತ್ತು . ಇನ್ನೊಂದು ದುರದೃಷ್ಟಕರ ಸಂಗತಿಯೆಂದರೆ ಈ ತಾಲೂಕಿನಲ್ಲಿ ಹಿಂದುಳಿದ ಸಮಾಜಕ್ಕೆ ಸೇರಿದ ಯಾವೊಬ್ಬ ವ್ಯಕ್ತಿಯೂ ಪ್ರಬಲವಾಗಿ ಬೆಳೆಯಲು ಬಿಡದೆ ರಾಜಕೀಯವಾಗಿ ಹಿಂದುಳಿದ ಸಮಾಜವನ್ನು ತುಳಿಯುತ್ತ ಬಂದಿರುವುದು ವಿಷಾದನೀಯ.


ಬಿಜೆಪಿ ರಾಷ್ಟ್ರೀಯ ಪಕ್ಷ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಮತ್ತು ಕೇಂದ್ರದಲ್ಲಿ ಅಧಿಕಾರವನ್ನು ಹಿಡಿಯಲೇಬೇಕೆಂದು ನರೇಂದ್ರ ಮೋದಿ ನಾಯಕತ್ವದ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತಿರುವಾಗ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ಶ್ರೀರಾಮಲು ಮತ್ತು ಅವರ ತಂಡವನ್ನು ಮತ್ತೆ ಬಿಜೆಪಿ ಗೆ ಕರೆತರುವ ಸೂಚನೆ ಅಂದಿನ ಪ್ರಧಾನಿ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರಿಂದಲೇ ಸಿಕ್ಕಿತ್ತು. ಆ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಶ್ರೀ ರಾಮಲು ನೇತೃತ್ವದ ತಂಡ ಬಿಜೆಪಿ ಸೇರಿದರು. ಅದರಂತೆಯೇ ಹೆಚ್.ಡಿ ಗಣೇಶ್ ಬಿಜೆಪಿ ಗೆ ಸೇರುವಂತೆ ರಾಷ್ಟ್ರೀಯ ನಾಯಕರ ಒತ್ತಡ ಹೆಚ್ಚಾಯಿತು . ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ಜಿಲ್ಲೆ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಪ್ರತಾಪ್ ಸಿಂಹರವರನ್ನು ಗೆಲ್ಲುಸಿ ಕೊಳ್ಳಬೇಕೆಂದು ಹೆಚ್.ಡಿ ಗಣೇಶ್ ಅವರು ಅಹಿಂದ ಸಮುದಾಯದ ಮತ ಯಾಚಿಸಿ ಪ್ರತಾಪ್ ಸಿಂಹ ಗೆಲುವಿಗೆ ಶ್ರಮಿಸಿದರು. ಅದರಂತೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಥಮ ಸ್ಥಾನ ನೀಡಲು ಸಹಕಾರಿಯಾಗಿದ್ದಿರ ಎಂದು ರಾಷ್ಟ್ರೀಯ ನಾಯಕರು ಹೆಚ್.ಡಿ ಗಣೇಶವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು.

ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯನವರು ಗೆದ್ದರೆ ಜೀವದ ಆನೆಯನ್ನೇ ನೀಡುತ್ತೇನೆಂದು ಹರಕೆ ಹೋತ್ತ ಕುರುಬ ಸಮಾಜದ ಏಕೈಕ ನಾಯಕ ಹೆಚ್.ಡಿ.ಗಣೇಶ್:

ಕರ್ನಾಟಕದ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಮತ್ತು ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮಾಜದ ಪ್ರತಿನಿಧಿಯಾಗಿ ಪ್ರಭಾವಿ ನಾಯಕನಾಗಿ ಬೆಳೆದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯವನರನ್ನು ಅಧಿಕಾರದಲ್ಲಿದ್ದಾಗಲೇ ಜೆ.ಡಿ.ಎಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೋರಡಿಸಿದ ಹೆಚ್ ಡಿ ದೇವೆಗೌಡರವರು  ಸಿದ್ದರಾಮಯ್ಯವನರನ್ನು ಸಂಪೂರ್ಣವಾಗಿ ರಾಜಕೀಯವಾಗಿ ಮುಗಿಸಲು ಪಣತೋಟ್ಟರು.ಜೆಡಿಎಸ್ ನಿಂದ ಹೋರಬಂದ ಸಿದ್ದರಾಮಯ್ಯ ಅಹಿಂದ ಸಂಘಟನೆ ಮಾಡಿ ಅದರಲ್ಲಿ ಯಶಸ್ಸು ಕಾಣಲಾಗದೇ ಕಾಂಗ್ರೇಸ್ ಪಕ್ಷ ಸೇರಿ ಚಾಮುಡೇಶ್ವರಿ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.ಚಾಮುಡೇಶ್ವರಿ ಉಪ ಚುನಾವಣೆಯನ್ನು ಈಡೀ ಭಾರತ ದೇಶವೇ ಎದುರು ನೋಡುತ್ತಿತ್ತು. ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ “ರಾಜಕೀಯದ ಕೋನೆ ಆಟ” ಎಂದೇ ಕರೆಯಲ್ಪಡುತ್ತಿದ್ದ ಚಾಮುಡೇಶ್ವರಿ ಉಪ ಚುನಾವಣೆ ಎದುರಾಯಿತು. ಹಿಂದುಳಿದ ಸಮಾಜಕ್ಕೆ ಸೇರಿದವರಾದ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಸಂಪೂರ್ಣವಾಗಿ ಮುಗಿಸಲೇಬೇಕೆಂದು ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪಣ ತೋಟ್ಟು ನಿಂತೆ ಬಿಟ್ಟರು.ಈ ಸಂದರ್ಭದಲ್ಲಿ ಕರ್ನಾಟಕದ ಕುರುಬ ಸಮುದಾಯ ಸಿದ್ದರಾಮಯ್ಯನವರ ಪರ ನಿಂತಿತು.ಚಾಮುಡೇಶ್ವರಿ ಉಪ ಚುನಾವಣೆಯಲ್ಲಿ  ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತನ್ನ ಸಚಿವ ಸಂಪುಟದ ಸಚಿವರೋಂದಿಗೆ ಹಣದ ಹೋಳೆಯನ್ನೆ ಹರಿಸಿ ಸಿದ್ದರಾಮಯ್ಯವನರನ್ನು ರಾಜಕೀಯವಾಗಿ ಮುಗಿಸಲು ತಂತ್ರ ರೂಪಿಸಿದಾಗ ಸಿದ್ಧರಾಮಯ್ಯನವರು ಈ ಚುನಾವಣೆಯಲ್ಲಿ ಗೆದ್ದರೆ “ಸಪ್ತ ಮಾತ್ರಿಕಾ” ದೇವಸ್ಥಾನಕ್ಕೆ ಜೀವದ ಆನೆಯನ್ನೇ ನೀಡುತ್ತೇನೆಂದು ಹರಕೆ ಹೋತ್ತ ಕರ್ನಾಟಕದ ಕುರುಬ ಸಮಾಜದ ಏಕೈಕ ನಾಯಕ ಹೆಚ್.ಡಿ.ಗಣೇಶ್. ಹೆಚ್ ಡಿ ಗಣೇಶ್ ರವರ ಹರಕೆಯಂತೆಯೆ ಮತ್ತು ಚಾಮುಂಡೇಶ್ವರಿ ಕ್ಷೇತ್ರ ಜನತೆ ಆಶೀರ್ವಾದ ಮಾಡುವುದರ ಮೂಲಕ ಜಯಶೀಲರನ್ನಾಗಿ ಮಾಡಿ ಸಿದ್ದರಾಮಯ್ಯನವರಿಗೆ ರಾಜಕೀಯ ಪುನರಜನ್ಮ ನೀಡಿದರು.


ಸಿದ್ದರಾಮಯ್ಯನವರ ಉಪ ಚುನಾವಣೆ ಗೆಲುವಿನ ಹರಕೆ ತೀರಿಸಿದ ಹೆಚ್.ಡಿ.ಗಣೇಶ್:

ಸಿದ್ದರಾಮಯ್ಯನವರ ಉಪ ಚುನಾವಣಯೆ ಗೆಲುವಿನ ಹರಕೆಯನ್ನು ತೀರಿಸಲು ಹೆಚ್.ಡಿ.ಗಣೇಶ್ ರವರು ವಿರೋಧ ಪಕ್ಷದ ಸಿದ್ದರಾಮಯ್ಯನವರನ್ನು ತನ್ನ ಮನೆಗೆ ಕರೆ ತಂದರು.ಜೀವದ ಆನೆಯನ್ನು ಸಾಕುವುದು ಕಷ್ಟವಾಗುತ್ತದೆಂದು ಅದರ ಬದಲಿಗೆ ಸುಮಾರು 20 ಕೆ.ಜಿಯ ತೂಕದ ಬೆಳ್ಳಿ ಆನೆಯನ್ನು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಅವರ ಮುದ್ದಿನ ಮಗ ರಾಕೇಶ್ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನದಂತೆ ಸಪ್ತ ಮಾತ್ರಿಕಾ ದೇವಸ್ಥಾನಕ್ಕೆ ನೀಡಿ ಹರಕೆಯನ್ನು ತೀರಿಸಿದರು.ನಿಜವಾಗಲೂ ಹೆಚ್.ಡಿ.ಗಣೇಶ್ ರವರು ಸಿದ್ದರಾಮಯ್ಯವನರ ಮೇಲೆ ಇಟ್ಟಿರುವ ಪ್ರೀತಿ,ಅಭಿಮಾನ ಮತ್ತು ಕಾಳಜಿಯನ್ನು ನಮ್ಮ ಕರ್ನಾಟಕದ ಕುರುಬ ಸಮಾಜ ತುಂಬು ಹೃದಯದ ಅಭಿಮಾನದಿಂದ ಹೆಚ್ ಡಿ ಗಣೇಶ್ ರವರಿಗೆ ಅಭಿನಂದನೆ ತಿಳಿಸಿದೆ.


.ಹೆಚ್.ಡಿ.ಗಣೇಶ್ ರವರ ಬೆನ್ನಿಗೆ ನಿಂತು ರಾಜಕೀಯ ಭವಿಷ್ಯದ ಪ್ರತಿ ಹಂತದಲ್ಲಿಯೂ ಜೋತೆಯಾಗಿ ನಿಂತ ಧರ್ಮಪತ್ನಿ ವೇದಾಕ್ಷೀ ಗಣೇಶ್:

ಒಬ್ಬ ಯಶಸ್ಸು ಕಂಡ ವ್ಯಕ್ತಿಯ ಹಿಂದೆ ಒಬ್ಬ ಹೆಣ್ಣು ಮಗಳು ಇರುತ್ತಾರೆ ಎಂಬ ಹಿರಿಯರ ಮಾತು ಗಣೇಶ್ ರವರ ಜೀವನದಲ್ಲಿಯೂ ನಿಜವಾಗಿದೆ.ಗಣೇಶ್ ರವರು ವ್ಯವಹಾರಿಕ, ಉದ್ಯಮ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ಪ್ರತಿ ಹಂತದಲ್ಲೂ ಗಣೇಶ್ ರವರ ಬೆಂಗಾವಲಿಗೆ ನಿಂತು ಧೈರ್ಯ ತುಂಬುತ್ತಿರುವ ಸಹೃದಯಿ,ಹೃದಯವಂತೆ ಶ್ರೀಮತಿ ವೇದಾಕ್ಷಿ ಗಣೇಶ್.ಗಣೇಶ್ ರವರ ಪತ್ನಿಯಾಗಿ,ಹಿತೈಷಿಯಾಗಿ ಒಳ್ಳೆಯ ಸ್ನೇಹಿತೆಯಾಗಿ ಗಣೇಶ್ ರವರ ರಾಜಕೀಯ ಜೀವನದ ನಿರ್ಧಾರಗಳಲ್ಲಿ ಭಾಗಿಯಾಗಿ ಸದಾ ಗಣೇಶ್ ರವರ ಸಮಾಜಸೇವೆಗೆ ಬೆಂಬಲಿಸುತ್ತ ಗಣೇಶ್ ರವರ ಏಳಿಗೆಗೆ ನಿರಂತರವಾಗಿ ಪ್ರಾರ್ಥಿಸುತ್ತಿರುವ ಶ್ರೀಮತಿ ವೇದಾಕ್ಷೀ ಗಣೇಶ್ ರವರ ಹೃದಯವಂತಿಕೆಗೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಭಾವಿ ಶಾಸಕ ಅಹಿಂದ ನಾಯಕ ಹೆಚ್.ಡಿ.ಗಣೇಶ್:

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕುರುಬ ಸಮುದಾಯ ಬಹು ಸಂಖ್ಯಾತರಾಗಿದ್ದು ಹಾಗೂ ಅಲ್ಪ ಸಂಖ್ಯಾತ ಹಿಂದುಳಿದ ಮತ್ತು ದಲಿತ ಸಮುದಾಯದ ಮತಗಳು ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತ ಬರುತ್ತಿರುವುದು ಕ್ಷೇತದ ಜನತೆಗೆ ತಿಳಿದಿದೆ.ತಾಲ್ಲೂಕಿನಲ್ಲಿ ಹಿಂದುಳಿದ ಸಮಾಜದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಇರುವ ಏಕೈಕ ಅಹಿಂದ ನಾಯಕ ಹೆಚ್ ಡಿ ಗಣೇಶ್.ತಾಲ್ಲೂಕಿನಲ್ಲಿ ಹಿಂದುಳಿದ ಸಮಾಜದ ಸ್ಥಿತಿಗತಿಗಳ ಬಗ್ಗೆ ತುಳಿತಕ್ಕೋಳಗಾಗಿರುವ ಅಹಿಂದ ಸಮುದಾಯದ ಬಗ್ಗೆ ಪೂರ್ಣ ಮಾಹಿತಿ ಪಡೆದಿರುವ ಅಹಿಂದ ಸಮುದಾಯದ ಯುವ ನಾಯಕರು ,ಬುದ್ದಿ ಜೀವಿಗಳು ಅಹಿಂದ ನಾಯಕ ಹೆಚ್ ಡಿ ಗಣೇಶ್ ರವರನ್ನ ಭೇಟಿ ಮಾಡಿ ತಾಲ್ಲೂಕಿನ ಅಹಿಂದ ಸಮುದಾಯದ ನಾಯಕತ್ವವನ್ನು ವಹಿಸಿಕೋಳ್ಳಲು ಮತ್ತು ತುಳಿತಕ್ಕೋಳಗಾಗಿರುವ ಹಿಂದುಳಿದ ಎಲ್ಲಾ ಸಮಾಜಗಳನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ ಮೇಲೆತ್ತುವ ದೃಷ್ಟಿಯಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಒತ್ತಡ ತರುತ್ತಿರುವ ಹಿನ್ನಲೆಯಲ್ಲಿ ಹೆಚ್ ಡಿ ಗಣೇಶ್ 2018 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.

ಆದ್ದರಿಂದ ಹೆಚ್ ಡಿ ಗಣೇಶ್ ರವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಸಹ ಅಹಿಂದ ಸಮುದಾಯದ ಹಿತದೃಷ್ಟಿಯಿಂದ ನಾವೆಲ್ಲ ಒಗ್ಗಟ್ಟಾಗಿ ಗಣೇಶ್ ರವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೋಡುವುದು ನಮ್ಮ ಅಹಿಂದ ಸಮುದಾಯದ ಜವಾಬ್ದಾರಿಯಾಗಿದೆ‌.


ಸಂಗ್ರಹ ಮತ್ತು ವರದಿ

ದೇವರಾಜ್ 

ಸಂಸ್ಥಾಪಕರು 

ಕುರುಬಾಸ್.ಕೋ.ಇನ್ 

9900687163

ರಾಯಣ್ಣ ಬ್ರಿಗೇಡ್ ನ ಮೊದಲ ವಿಕೆಟ್ ಪತನ : ಬಿಜೆಪಿಯಿಂದ ಈಶ್ವರಪ್ಪ ಆಪ್ತ ವೆಂಕಟೇಶ್‍ಮೂರ್ತಿ ಔಟ್ /ಕುರುಬಾಸ್.ಕೋ.ಇನ್ 

ಬೆಂಗಳೂರು, ಜ.10-ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ ಅವರ ಪರಮಾಪ್ತ, ಬಿಬಿಎಂಪಿ ಮಾಜಿ ಮೇಯರ್ ಟಿ.ವೆಂಕಟೇಶ್‍ಮೂರ್ತಿ ಅವರನ್ನು ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ವೆಂಕಟೇಶ್‍ಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಮೂರು ಬಾರಿ ಕಾರ್ಪೊರೇಟರ್  ಆಗಿದ್ದ ವೆಂಕಟೇಶ್‍ಮೂರ್ತಿ ಅವರು ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬಂದಾಗ ಮೇಯರ್ ಆಗಿ ಆಡಳಿತ ನಡೆಸಿದ್ದರು.

ಇತ್ತೀಚೆಗೆ ಕೆ.ಎಸ್.ಈಶ್ವರಪ್ಪ ಅವರು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದಾಗ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರಾಜ್ಯ ಪ್ರಧಾನಕಾರ್ಯದರ್ಶಿಗಳಾಗಿದ್ದ ವೆಂಕಟೇಶ್ ಮೂರ್ತಿ ಅವರು ಜ.26 ರಂದು ಬಾಗಲಕೋಟೆಯ ಕೂಡಲಸಂಗಮದಲ್ಲಿ ಹಮ್ಮಿಕೊಂಡಿದ್ದ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.  ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಆರೋಪಿಸಿ ಮೂರು ದಿನಗಳ ಹಿಂದೆ ಅವರಿಗೆ ನೋಟಿಸ್ ನೀಡಲಾಗಿತ್ತು. ಇಂದು ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ

ಕುರುಬ ವಿರೋಧಿ ಬಿಜೆಪಿಗೆ ಧಿಕ್ಕಾರ….!!!

ಕುರುಬಾಸ್.ಕೋ.ಇನ್ www.ಕುರುಬಾಸ್.ಕೋ.ಇನ್