*ಭೇರ್ಯ ಗ್ರಾಮದ ಪಕ್ಕದ ಬಟಿಗನಹಳ್ಳಿ*

0 Comments

*ಭೇರ್ಯ ಗ್ರಾಮದ ಪಕ್ಕದ ಬಟಿಗನಹಳ್ಳಿ*

    ಭೇರ್ಯ  ಕೆ.ಆರ್.ನಗರ ತಾಲೂಕಿನ ವಾಣಿಜ್ಯ ನಗರಗಳಲ್ಲಿ ಪ್ರಮುಖವಾದ ಗ್ರಾಮ. ಇದರ ೫೦೦ ಮೀಟರ್ ದೂರದಲ್ಲಿರುವ ಗ್ರಾಮವೆ ಬಟಿಗನಹಳ್ಳಿ. ಬಹುತೇಕ ಒಣ ಬೇಸಾಯ ಪದ್ದತಿಯನ್ನು ಹೊಂದಿರುವ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ.

*ಚರಂಡಿಯೆ ಇಲ್ಲದ ಗ್ರಾಮ*

ಗ್ರಾಮದಲ್ಲಿ ಹುಡುಕಿಕೊಂಡರು ಚರಂಡಿ ಕಾಣಿಸುವುದಿಲ್ಲ. ಮಳೆಗಾಲ ಬಂದರೆ ಊರಿಗೆ ಊರೆ ಕೆರೆಯಂತಾಗುತ್ತದೆ ಎಂಬುದು ಇಲ್ಲಿನ ಜನರ ಆರೋಪ. ನಾವು ಸಹ ಗ್ರಾಮದಲ್ಲಿ ಬೈಕ್ ಹೋಡಿಸುವಾಗ ನಾಲ್ಕೈದು ಪ್ರಪಾತಗಳನ್ನು ದಾಟಿಸಬೇಕಾಯ್ತು.

*ಹೆಸರಿಗೆ ಮಾತ್ರ ಸರ್ಕಾರಿ ಶಾಲೆ*

   ಒಂದು ಭಯಂಕರ ವಾತವರಣ ಹೊಂದಿರುವ ಕಿರಿಯ ಪ್ರಾಥಮಿಕ ಶಾಲೆಯಿದು. ಶಾಲೆಗೆ ಯಾವುದೆ ಕಾಂಪೌಂಡ್ ಹಾಗೂ ಗೇಟಿನ ವ್ಯವಸ್ಥೆಯಿಲ್ಲ.
ಊರಿನ ಹೊರವಲಯದಲ್ಲಿ ಇರುವ ಶಾಲೆಯ ಪಕ್ಕದಲ್ಲಿ ಒಂದು ಕೆರೆಗೆ ನೀರು ತುಂಬುವ ಕಾಲುವೆಯಿದೆ. ಮಳೆಗಾಲ ಬಂದರೆ ಶಾಲಾ ಮೈದಾನವು ಕೆರೆಯಂತಾಗುತ್ತದೆ. ಇಲ್ಲಿನ ಕಾಂಪೌಂಡ್ ಕುಸಿಯಲು ಈ ಕಾಲುವೆಯೆ ಕಾರಣ. ಹಿಂದೆ ಈ ಶಾಲೆ ಇರುವ ಜಾಗ ಕೆರೆಯಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ‌ ಆದರೆ, ಅದನ್ನು ಎತ್ತರಿಸುವ ಗೋಜಿಗೆ ಅವರು ಹೋಗುವುದಿಲ್ಲ. ಇನ್ನು ಶಾಲೆಯಲ್ಲಿ ಮೂರು ಶೌಚಾಲಯವಿದೆ. ಎರಡು ಹಾಳಗಿದ್ದು ಒಂದು ಚಾಲನೆಯಲ್ಲಿದೆ.

*ತೆರೆದಿದೆ ಸಂಪಿನ ಬಾಯಿ*

ಶಾಲೆಯ ಸಂಪಿನ ಬಾಯಿ ತೆರೆದ ಸ್ಥಿತಿಯಲ್ಲೆ ಇದೆ. ನಾವು ಅಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನವೀನರವರಿಗೆ ಕರೆ ಮಾಡಿ ಕರೆಸಿಕೊಂಡು ಮಾತಿಗಿಳಿದೋ, ಅವರು ಕೊಟ್ಟ ಕಾರಣ ಒಪ್ಪುವಂತೆಯು ಇರಲಿಲ್ಲ. ಇನ್ನೂ ಶಾಲಾಭಿವೃಧ್ಧಿ ವಿಷಯದಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ ಎಂದು ಅಲ್ಲಿನ ಯುವಕರು ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಂಪೌಂಡ್ ನಿರ್ಮಾಣಕ್ಕೆ ಇಲಾಖೆಯಲ್ಲಿ ಇರುವ ಇತಿಮಿತಿಗಳ ಕುರಿತು ಅಳಲು ತೋಡಿಕೊಂಡರು. ವ್ಯವಸ್ಥೆ ಹೊರಗೆ ನಾವು ಏನು ಬೇಕಾದರೂ ಮಾತನಾಡಬಹುದು. ವ್ಯವಸ್ಥೆಯೊಳಗೆ ನಿಂತು ಕೆಲಸ ಮಾಡುವವರಿಗೆ ಅದರ ಕಷ್ಟ ಗೊತ್ತಿರುತ್ತದೆ. ನಿಯಮಗಳು ನೂರಿರಲಿ ವಿಷಯಾಧಾರಿತ ನೆಲೆಯಲ್ಲಿ, ಮಾನವೀತೆಯ ನೆಲೆಯಲ್ಲಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿ ವಿನಂತಿ.

*ತುಂಬದ ಕೆರೆ ಒಣಗಿದೆ ಜನರ ಜೀವ ಸೆರೆ*

ಗ್ರಾಮದಲ್ಲಿ ಎರಡು ಕೆರೆಗಳಿವೆ.
ಒಂದು ಕೆರೆ ಹಾರಂಗಿ ಜಲಾಶಯದಿಂದ ಬರುವ ನೀರಿನಿಂದ ತುಂಬಿದೆ, ಮತ್ತೊಂದು ದೊಡ್ಡ ಕೆರೆ ಗೊರೂರು ಜಲಾಶಯದಿಂದ ಬರುವ ನೀರು ಬರದೆ ಒಣಗಿದೆ. ಸ್ಥಳೀಯ ಆಡಳಿತದಿಂದ ನೀರು ತುಂಬಲಾಗಿದೆ ಎಂದು ವಾರ್ತಾಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಲಾಗಿದೆ. ಇಂತಹ ಕುಗ್ರಾಮಗಳ ನೋವು ಜನಪ್ರತಿನಿಧಿಗಳಿಗೆ ಕಾಣಿಸುವುದಿಲ್ಲ ಎಂಬುದೆ ವಿಪರ್ಯಾಸ.

   ನಮ್ಮ ಈ ಹೋರಾಟದಲ್ಲಿ ನೆರವಾದ ವರದರಾಜು, ಜಯಂತ್,ಹರೀಶ್ ರೈ, ನವೀನ್ ಮುಂತಾದವರಿಗೆ ಧನ್ಯವಾದಗಳು…..

✍ *ದೆಗ್ಗನಹಳ್ಳಿ ಆನಂದ್.*

One thought on “*ಭೇರ್ಯ ಗ್ರಾಮದ ಪಕ್ಕದ ಬಟಿಗನಹಳ್ಳಿ*”

Leave a Reply

Your email address will not be published. Required fields are marked *