posted by devaraj BEEREGOWDA
ನಮ್ಮ ಹೆಮ್ಮೆ ನಮ್ಮ ಸಿದ್ದರಾಮಯ್ಯ

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಮೂರನೇ ಆವೃತ್ತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಈ ಬಾರಿ ವಿಭಿನ್ನ ಕ್ಷೇತ್ರಗಳ ಹಲವು ಸಾಧಕರನ್ನ ಸಾಧಕರ ಕುರ್ಚಿಯಲ್ಲಿ ಕೂರಿಸಿದ್ದ ಜೀ ಕನ್ನಡ ಈಗ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಅತಿಥಿಯಾಗಿಸಲಿದೆ.
ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ವೀಕಂಡ್ ಸಾಧಕರ ಸೀಟಿನಲ್ಲಿ ಕೂತಿದ್ದರು. ಈ ಎಪಿಸೋಡ್ ಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಮತ್ತು ಪ್ರಶಂಸೆ ಸಿಕ್ಕಿತ್ತು. ಈಗ ರಾಜ್ಯದ ಮುಖ್ಯಮಂತ್ರಿ ಅವರನ್ನ ಕರೆತರುವ ಮೂಲಕ ಮತ್ತೊಂದು ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುತ್ತಿದೆ.

ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರ

ಹಾಗಾದ್ರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತೆ? ಯಾವಾಗ ರೆಕಾರ್ಡಿಂಗ್ ಆಗುತ್ತೆ? ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಮುಂದಿದೆ ನೋಡಿ…..

SIDDU
our cm

‘ವೀಕೆಂಡ್ ವಿತ್ ರಮೇಶ್-3’ ಕಾರ್ಯಕ್ರಮ ಕೊನೆಯ ಹಂತದಲ್ಲಿದ್ದು, ಕೊನೆಯ ಮೂರು ವಾರಗಳು ಮಾತ್ರ ಪ್ರಸಾರವಾಗಲಿದೆ. ಈಗ ಸಿಕ್ಕಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಾರದ ಅತಿಥಿಯಾಗಲಿದ್ದಾರಂತೆ.

ಜೂನ್ 22 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ರೆಕಾರ್ಡಿಂಗ್ ನಡೆಯಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೂ ರೆಕಾರ್ಡಿಂಗ್ ನಡೆಯಲಿದೆಯಂತೆ.

King Siddaramaiah

ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ಎಪಿಸೋಡ್ ನಲ್ಲಿ ಅವರ ಪತ್ನಿ ಪಾರ್ವತಮ್ಮ ಭಾಗಿಯಾಗುವ ಸಾಧ್ಯತೆ ಇದೆಯಂತೆ. ಇದುವರೆಗೂ ಸಾರ್ವಜನಿಕವಾಗಿ ಪಾರ್ವತಮ್ಮ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಆದ್ರೆ, ಈ ಕಾರ್ಯಕ್ರಮಕ್ಕಾಗಿ ವೇದಿಕೆ ಹತ್ತಲಿದ್ದಾರಂತೆ.
ಮತ್ತೊಂದೆಡೆ ಈ ಕಾರ್ಯಕ್ರಮದ ಬಗ್ಗೆ ಸಿದ್ದರಾಮಯ್ಯ ಅವರ ‘ಟಿಪಿ’ಯಲ್ಲೂ ನಮೂದಾಗಿದ್ದು, ಕೆಲವು ಸಚಿವರು, ಶಾಸಕರು ಹಾಗೂ ಗೆಳಯರಿಗೆ ಆಹ್ವಾನ ನೀಡಲಾಗಿದೆಯಂತೆ.

ಅಂದ್ಹಾಗೆ, ಸಿದ್ದರಾಮಯ್ಯ ಅವರಿಗೆ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಷ್ಟವಿರಲಿಲ್ಲವಂತೆ. ಆದ್ರೆ, ಗೆಳೆಯರ ಒತ್ತಾಯ ಮೆರೆಗೆ ಸಾಧಕರ ಸೀಟಿನಲ್ಲಿ ಕೂರಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಬಾಲ್ಯ, ರಾಜಕೀಯ ಜರ್ನಿ, ರಾಕೇಶ್ ಅವರ ಸಾವು, ಹೀಗೆ ಪ್ರತಿಯೊಂದು ವಿಷ್ಯಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ.

ನಟಿ ಶ್ರುತಿ ಅವರು ಎಪಿಸೋಡ್ ಇಂದು (ಜೂನ್ 17) ಮತ್ತು ಹಿರೆಮಗಳೂರು ಕಣ್ಣನ್ ಅವರ ಎಪಿಸೋಡ್ ನಾಳೆ (ಜೂನ್ 18) ಪ್ರಸಾರವಾಗಲಿದೆ. ಮುಂದಿನ ವಾರ ಅಂದ್ರೆ ಜೂನ್ 24 ಮತ್ತು 25 ರಂದು ಸಿದ್ದರಾಮಯ್ಯ ಅವರ ಎಪಿಸೋಡ್ ಪ್ರಸಾರ ಮಾಡಲು ನಿರ್ಧರಿಸಲಾಗಿದೆಯಂತೆ.
#ಶೇರ್ ಮಾಡಿ 

https://youtu.be/hJukZS65S0c